ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿಯೂ ಮೋದಿ ಅಲೆ, ಕಾಂಗ್ರೆಸ್ ಇನ್ನೈದು ವರ್ಷ ಕಾಯ್ಬೇಕು: ಅಮಿತ್ ಶಾ

|
Google Oneindia Kannada News

Recommended Video

Lok Sabha Elections 2019: ಈ ಬಾರಿ ಯಾರದ್ದು ಅಲೆ ಗೊತ್ತಾ?

ನವದೆಹಲಿ, ಏಪ್ರಿಲ್ 02: "ಈ ಬಾರಿಯೂ ಮೋದಿ ಅಲೆ ಇದೆ. ಆದ್ದರಿಂದ ಕಾಂಗ್ರೆಸ್ ಅಧಿಕಾರದ ಕನಸು ಕಾಣೋದಕ್ಕೆ ಕನಿಷ್ಠ ಇನ್ನೈದು ವರ್ಷದರೂ ಕಾಯಲೇಬೇಕು" ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜೀ ನ್ಯೂಸ್ ನಡೆಸಿದ ಇಂಡಿಯಾ ಕಾ ಡಿಎನ್ ಎ ಕಾಂಕ್ಲೇವ್ ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ಏನೆಲ್ಲ ಸಾಧನೆ ಮಾಡಿದೆ ಎಂಬುದನ್ನು ಹಂಚಿಕೊಂಡರು.

ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!

2019 ರಲ್ಲಿ ಏಕೆ ಮತ್ತೆ ಮೋದಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂಬ ಬಗ್ಗೆಯೂ ಅವರು ವಿವರಣೆ ನೀಡಿದರು. ಆದರೆ ಬಿಜೆಪಿ ಯಾವ ಚುನಾವಣೆಯನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ನಮ್ಮ ಕಾರ್ಯಕರ್ತರು ಎಲ್ಲಾ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಶಾ ಹೇಳಿದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

Congress has to wait for at least 5 years: Amit Shah

ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯತ್ತಮ ನಾಯಕತ್ವದಿಂದಾಗಿ ಈಗ ಇಡೀ ಜಗತ್ತೂ ಭಾರತದತ್ತ ನೋಡುತ್ತಿದೆ. ಆದ್ದರಿಂದ ನಮ್ಮ ಸರ್ಕಾರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಜನರಿಗೆ ನಂಬಿಕೆ ಇದೆ. ಆದ್ದರಿಂದ ಮೋದಿಯವರೇ ಎಷ್ಟೋ ವಿಷಯಗಳಲ್ಲಿ ಖುದ್ದಾಗಿ ಪರಾಮರ್ಶಿಸುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಪಾಸ್ ಪೋರ್ಟ್ ಗೆ ಸಾಕಷ್ಟು ಮೌಲ್ಯ ಬಂದಿದೆ ಎಂದು ಅವರು ಹೇಳಿದರು.

English summary
There is Modi wave in this elections too. Congress should wait for at least 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X