• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾವು ಅಧಿಕಾರಕ್ಕೆ ಬಂದರೆ 3 ರೈತ ವಿರೋಧಿ ಕಾನೂನುಗಳು ರದ್ದು: ಕಾಂಗ್ರೆಸ್

|

ನವದೆಹಲಿ, ನವೆಂಬರ್ 27: ನಾವು ಅಧಿಕಾರಕ್ಕೆ ಬಂದರೆ ಮೂರು ರೈತ-ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ರೈತರಿಗೆ ಭರವಸೆ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಆದ್ಯತೆ ಮೇರೆಗೆ ಮೂರು ರೈತ-ವಿರೋಧಿ ನೀತಿಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದರು.

ಸತ್ಯದ ಹೋರಾಟವನ್ನು ಸರ್ಕಾರಗಳು ತಡೆಯಲಾಗಲ್ಲ: ರಾಹುಲ್ ಗಾಂಧಿ

ದೇಶಾದ್ಯಂತ ನಡೆಯತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್‌, ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೂರು ರೈತ-ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಶುಕ್ರವಾರ ಭರವಸೆ ನೀಡಿದೆ.

ರೈತರು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೇರಿಲ್ಲ. ಅವರು ಎಲ್ಲರ ಹೊಟ್ಟೆ ತುಂಬಿಸಲು ಶ್ರಮ ಪಡುತ್ತಾರೆ. ಕೇಂದ್ರ ಸರ್ಕಾರ ಅವರ ಧ್ವನಿಯನ್ನು ಆಲಿಸಬೇಕು ಎಂದರು.

ನಮ್ಮ ಪಕ್ಷ ಆರಂಭದಿಂದಲೂ ಅದನ್ನು ವಿರೋಧಿಸುತ್ತಿದೆ. ಈ ಕಾಯ್ದೆ ವಿರೋಧಿಸಿದ್ದಕ್ಕೆ ಕಾಂಗ್ರೆಸ್‌ ಸಂಸದರನ್ನು ಅಮಾನತಿನಲ್ಲಿ ಕೂಡ ಇಡಲಾಗಿತ್ತು ಎಂದರು.

ದೇಶದಲ್ಲಿ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ, ಈ ಮೂರು ಕಾಯ್ದೆಗಳಿಂದ ರೈತರಿಗೆ ನಷ್ಟವಾಗುವುದನ್ನು ತಡೆಯಲು ರಾಜ್ಯ ಮಟ್ಟದಲ್ಲಿ ಹೊಸ ಕಾನೂನುಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.

ಇನ್ನೊಂದೆಡೆ ಸತ್ಯದ ಪರವಾಗಿ ನಡೆದ ಯುದ್ಧವನ್ನು ಜಗತ್ತಿನಲ್ಲಿ ಯಾವುದೇ ಸರ್ಕಾರಗಳು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸತ್ಯಕ್ಕಾಗಿ ನಡೆದ ಹೋರಾಟವನ್ನು ಯಾವುದೇ ಸರ್ಕಾರಗಳು ತಡೆಯುವುದಕ್ಕೆ ಸಾಧ್ಯವಿಲ್ಲ. "ಇದು ಕೇವಲ ಆರಂಭವಷ್ಟೇ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ರೈತರ ಬೇಡಿಕೆಗಳನ್ನು ಮತ್ತು ಒಪ್ಪಿಕೊಳ್ಳಬೇಕು. ಕೃಷಿ ಸಂಬಂಧಿತ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳಬೇಕು" ಎಂದು 'IamWithFarmers' ಹ್ಯಾಷ್ ಟ್ಯಾಗ್ ನೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

English summary
Supporting the farmer’s movement, Congress president Sonia Gandhi and former president Rahul Gandhi on Friday said that if their party comes to power at the Centre, they would definitely quash the three anti-farmer laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X