ಮತದಾರರ ಚೀಟಿ ಪತ್ತೆ ಪ್ರಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು

ನವದೆಹಲಿ, ಮೇ 09: ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ಪತ್ತೆಯಾದ ಮತದಾರರ ಚೀಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ದೆಹಲಿಯಲ್ಲಿ ದೂರು ನೀಡಿದ ಬಳಿಕ ನಿಯೋಗದ ಆನಂದ್ ಶರ್ಮಾ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ಖಚಿತವಾಗಿದೆ. ಹಾಗಾಗಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ರಚಿಸುತ್ತಿದೆ ಎಂದರು.

ಕರ್ನಾಟಕದಲ್ಲಿ ಅಮಿತ್‌ಶಾ, ಮೋದಿ ಇವರ ಯಾರ ಪ್ರಚಾರವೂ ಫಲ ಕೊಟ್ಟಿಲ್ಲ, ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಹಾಗಾಗಿ ಭೀತಿಯಿಂದ ಐಸಿ ಸೇರಿದಂತೆ ಇತರೆ ಇಲಾಖೆಗಳನ್ನು ಬಳಸಿ ಷಡ್ಯಂತ್ರ ನಡೆಸಲಾಗುತ್ತಿದೆ ಇದರಿಂದ ಕಾಂಗ್ರೆಸ್ ನಾಯಕರನ್ನು ಹೆದರಿಸುವ ಪ್ರಯತ್ನ ನಡೆದಿದೆ.

Cong files complaint against Bjp conspiracy before CEC

ಮಂಗಳವಾರ ದಾಲಿ ಮಾಡಿದ್ದು, ಬಿಜೆಪಿ ಆ ಮನೆ ಬಿಜೆಪಿಯ ಕಾರ್ಯಕರ್ತನ ಹೆಸರಿನಲ್ಲಿದೆ, ಈ ಬಗ್ಗೆ ನಮ್ಮ ಬಳಿ ಸಾಕಷ್ಟು ಆಧಾರವಿದೆ ಅದನ್ನು ಆಯೋಗದ ಮುಂದೆ ಇಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಿರುವ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು, ಇಂದು ಸುಮಾರು ಸಾವಿರಾರು ಮತದಾರರ ನಕಲಿ ಗುರುತಿನ ಚೀಟಿ ವಶಪಡಿಸಿಕೊಂಡಿದ್ದರು. ಈ ಪೈಕಿ 9746 ಐಡಿಗಳು, ಸಣ್ಣ ಸಣ್ಣ ಬಂಡಲ್ ಗಳಲ್ಲಿ ಸಿಕ್ಕಿವೆ. ಇವೆಲ್ಲವೂ ಅಸಲಿ ಮತದಾನ ಗುರುತಿನ ಚೀಟಿಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+