ಗೊಂದಲ, ಸಂಚು ಮತ್ತು ಕಾಂಗ್ರೆಸ್ ಒಂದೇ ಅರ್ಥದ ಪದಗಳು: ಬಿಜೆಪಿ

ನವದೆಹಲಿ, ಸೆಪ್ಟೆಂಬರ್ 4: ರಾಜಕೀಯದ ದುರುದ್ದೇಶದಿಂದ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಗೊಂದಲ, ಸಂಚು ಮತ್ತು ಕಾಂಗ್ರೆಸ್ (Confusion, Conspiracy, Congress) ಸಮಾನಾರ್ಥಕ ಪದಗಳಾಗಿವೆ ಎಂದು ಅವರು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ತನ್ನ ರಾಜಕೀಯ ಹಿತಾಸಕ್ತಿಗಾಗಿ ದೇಶದ ವಿರುದ್ಧ ಯಾವ ಹಂತಕ್ಕೆ ಬೇಕಾದರೂ ಹೋಗುತ್ತದೆ ಎಂಬುದನ್ನು ಸಾರ್ವಜನಿಕರ ಮುಂದೆ ಯಾವಾಗಲೂ ವಾಸ್ತವಗಳನ್ನು ಇಡುವ ಮೂಲಕ ಪ್ರತಿ ಬಾರಿಯೂ ಬಿಜೆಪಿಯು ಸಾಬೀತಿಪಡಿಸುತ್ತಿದೆ.

Confusion, Conspiracy, Congress are synonyms: Sambit Patra

ನಕ್ಸಲಿಸಂ ವಿಚಾರದಲ್ಲಿ ಕಾಂಗ್ರೆಸ್ ಎರಡು ಮುಖಗಳನ್ನು ಹೊಂದಿದೆ. ರಾಜಕೀಯಕ್ಕಾಗಿ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡುತ್ತಿದೆ ಮತ್ತು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ ಎಂದು ಪಾತ್ರಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಕೆಲವು ಮುಖಂಡರು ಬಹಿರಂಗವಾಗಿ ನಕ್ಸಲೀಯರನ್ನು ಬೆಂಬಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಅಥವಾ ಚುನಾವಣೆಗಳಲ್ಲಿನ ವೇದಿಕೆಗಳಲ್ಲಿ ಅವುಗಳನ್ನು ಪೋಷಿಸುತ್ತಾರೆ. ರಾಷ್ಟ್ರೀಯ ಸಲಹಾ ಸಮಿತಿಯು ನಕ್ಸಲ್ ಬೆಂಬಲಿಗರ ಮೂಲ ನೆಲೆಯಾಗಿತ್ತು. ಸೋನಿಯಾ ಗಾಂಧಿ ಅವರು ಯೋಜನಾ ಆಯೋಗ ಮತ್ತು ಎನ್ಎಸಿಗಳಲ್ಲಿ ನಕ್ಸಲರನ್ನು ಸೇರಿಸಲು ಸೋನಿಯಾ ಗಾಂಧಿ ಪ್ರಯತ್ನಿಸಿದ್ದರು ಎಂದು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+