54 ಲಕ್ಷ ರೂ ATM ಹಣದೊಂದಿಗೆ ಪರಾರಿಯಾದ ಡ್ರೈವರ್!

cms-cash-van-driver-sanjay-escapes-with-rs-54-lakh-cash-for-atm
ನವದೆಹಲಿ,ಸೆ. 25: ಸರಿಯಾಗಿ ಒಂದು ಕೋಟಿ ರೂಪಾಯಿ ನಗದನ್ನು ಕ್ಯಾಶ್ ವ್ಯಾನಿನಲ್ಲಿ ತುಂಬಿ ಎಟಿಎಂಗಳಿಗೆ ತುಂಬಿ ಬಾ ಎಂದು ಕಳುಹಿಸಿದರೆ ವ್ಯಾನಿನ ಯುವ ಚಾಲಕ ಏನು ಮಾಡಿದ್ದಾನೆ ಗೊತ್ತಾ? ಅರ್ಧ ಕೆಲಸ ಮಾಡಿದ ಬಳಿಕ ಉಳಿದ 54 ಲಕ್ಷ ರೂ ನಗದಿನೊಂದಿಗೆ ಸೈಲೆಂಟಾಗಿ ಪರಾರಿಯಾಗಿದ್ದಾನೆ!

ರಾಷ್ಟ್ರದ ರಾಜಧಾನಿಯಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. 30 ವರ್ಷದ ಚಾಲಕ ಸಂಜಯನೇ ಈ ಚಾಲಾಕಿತನ ತೋರಿರುವುದು.

Cash Management Services (CMS) ಎಂಬ ಗುತ್ತಿಗೆ ಸಂಸ್ಥೆ ಒಂದಷ್ಟು ಬ್ಯಾಂಕುಗಳ ATM ಕೇಂದ್ರಗಳಿಗೆ ತೆರಳಿ ಹಣ ಭರ್ತಿ ಮಾಡುವ ಹೊಣೆಗಾರಿಕೆಯನ್ನು ನಿಭಾಯಿಸುತ್ತದೆ. ಅದಕ್ಕೆಂದೇ ಕ್ಯಾಷ್ ವ್ಯಾನು, ಡ್ರೈವರ್ ಅಂತೆಲ್ಲಾ ಸಿಬ್ಬಂದಿಯನ್ನು ಹೊಂದಿದೆ.

ಆದರೆ ಇಂದು ಬೆಳಗ್ಗೆ ಡ್ರೈವರ್ ಸಂಜಯ್ ಎಂದಿನಂತೆ ಆಯಕಟ್ಟಿನ ಜವಾಬ್ದಾರಿ ಹೊತ್ತು ವ್ಯಾನ್ ಚಲಾಯಿಸಿಕೊಂಡು ಹೊರಟಿದ್ದಾನೆ. ಅರ್ಧ ಕೆಲಸ ಮಾಡಿ ಮುಗಿಸುವವರೆಗೂ ಸರಿಯಾಗಿಯೆ ಜವಾಬ್ದಾರಿ ನಿಭಾಯಿಸಿದ್ದಾನೆ. ಆದರೆ ಮುಂದೆ ಮಧ್ಯಾಹ್ನವಾಗುತ್ತಿದ್ದಂತೆ ವ್ಯಾನನ್ನು ನಿಗದಿತ ಮಾರ್ಗದಲ್ಲಿ ಕೊಂಡೊಯ್ಯದೆ ಬೇರೆ ಹಾದಿ ಹಿಡಿದಿದ್ದಾನೆ.

ಮಧ್ಯ ದೆಹಲಿಯ ಕರೋಲ್ ಬಾಗ್ ಪ್ರದೇಶಕ್ಕೆ ಬಂದವನೆ ವ್ಯಾನಿನಲ್ಲಿದ್ದ ಸಿಬ್ಬಂದಿ ಕೆಳಗಿಳಿದು ATM ಕೇಂದ್ರಗಳಿಗೆ ತೆರಳಿ ಹಣ ಭರ್ತಿ ಮಾಡಲು ಹೋದಾಗ ಸಂಜಯ್, ವ್ಯಾನಿನಲ್ಲಿದ್ದ 54 ಲಕ್ಷ ರೂ ನಗದಿನೊಂದಿಗೆ ಜಾಗ ಖಾಲಿ ಮಾಡಿದ್ದಾನೆ, ಅಷ್ಟೇ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+