ಮೋದಿ-ಕುಮಾರಸ್ವಾಮಿ ಭೇಟಿ, ಹಲವು ಬೇಡಿಕೆ ಮಂಡಿಸಲಿರುವ ಎಚ್‌ಡಿಕೆ
Recommended Video
ನವದೆಹಲಿ, ಜೂನ್ 14: ನಾಳೆ (ಜೂನ್ 15)ರಂದು ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರೆ.
ನಾಳೆ ದೆಹಲಿಯಲ್ಲಿ ನೀತಿ ಆಯೋಗದ ಸಭೆ ಇದ್ದು ಸಭೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ ಅವರು ತೆರಳುತ್ತಿದ್ದಾರೆ. ಆದರೆ ಸಭೆಗೂ ಮುನ್ನಾ ಪ್ರಧಾನಿ ಅವರ ನಿವಾಸದಲ್ಲಿಯೇ ಕುಮಾರಸ್ವಾಮಿ ಅವರು ಮೋದಿ ಅವರನ್ನು ಭೇಟಿ ಆಗಲಿದ್ದಾರೆ.
ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಅವರು ಮೋದಿ ಅವರನ್ನು ಭೇಟಿ ಆಗಲಿದ್ದಾರೆ. ಕಳೆದ ಬಾರಿ ಭೇಟಿ ಆಗಿದ್ದಾಗ ರೇವಣ್ಣ, ದೇವೇಗೌಡ ಸೇರಿ ನಿಯೋಗವೇ ಇತ್ತು, ಆದರೆ ಈ ಬಾರಿ ಒಬ್ಬರೇ ಭೇಟಿ ಆಗುತ್ತಿದ್ದಾರೆ.

ರಾಜ್ಯದ ಬರ ಪರಿಸ್ಥಿತಿ, ನರೇಗಾ ಅನುದಾನ ಇನ್ನೂ ಹಲವು ವಿಷಯಗಳನ್ನು ಕುಮಾರಸ್ವಾಮಿ ಅವರು ಮೋದಿ ಅವರ ಬಳಿ ಚರ್ಚಿಸಲಿದ್ದಾರೆ. ಮೋದಿ ಅವರಿಂದ ಧನಾತ್ಮಕ ಪ್ರತಿಕ್ರಿಯೆಯ ವಿಶ್ವಾಸದಲ್ಲಿ ಕುಮಾರಸ್ವಾಮಿ ಅವರಿದ್ದಾರೆ.
ನಾಳೆ ಅತ್ಯಂತ ಪ್ರಮುಖವಾದ ನೀತಿ ಆಯೋಗದ ಸಭೆ ನಡೆಯಲಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ.












Click it and Unblock the Notifications