ಸಿಜೆಐ ಖೆಹರ್ ಕೆಲವೇ ಸೆಕೆಂಡ್ ಗಳ ರಾಷ್ಟ್ರಪತಿಯಾಗಲಿದ್ದಾರೆ!
ನವದೆಹಲಿ, ಜುಲೈ 25: ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಇಂದು(ಜುಲೈ 25) ಕೆಲವೇ ಸೆಕೆಂಡ್ ಗಳ ಮಟ್ಟಿಗೆ ಭಾರತದ ರಾಷ್ಟ್ರಪತಿಯಾಗುತ್ತಾರೆ! ಅಚ್ಚರಿಯಾದರೂ ಇದು ಸತ್ಯ!
ಭಾರತದ ನಿಯೋಜಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣವಚನ ಸ್ವೀಕಾರಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್, ಕೋವಿಂದ್ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ರಾಷ್ಟ್ರಪತಿ ಭವನದಿಂದ ಸಂಸತ್ತಿನವರೆಗೆ ಸಾರೋಟಿನಲ್ಲಿ ತೆರಳುವ ಪ್ರಣಬ್ ಮುಖರ್ಜಿ ಎಡಕ್ಕೆ ಮತ್ತು ರಾಮನಾಥ್ ಕೋವಿಂದ್ ಬಲಕ್ಕೆ ಕುಳಿತಿರುತ್ತಾರೆ. ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ರಾಮನಾಥ್ ಕೋವಿಂದ್ ಪ್ರಣಬ್ ಮುಖರ್ಜಿಯವರ ಸೀಟಿನಲ್ಲಿ ಅಂದರೆ ಸಾರೋಟಿನ ಎಡಭಾಗದ ಸೀಟಿನಲ್ಲಿ ಕೂರುತ್ತಾರೆ. ಮತ್ತು ಆ ಸಮಯದಲ್ಲಿ ಪ್ರಣಬ್ ಮುಖರ್ಜಿ ಬಲ ಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಹೀಗೆ ಇಬ್ಬರೂ ದಿಗ್ಗಜರು ಪರಸ್ಪರ ಅದಲು ಬದಲಾಗುವ ಕೆಲವೇ ಸೆಕೆಂಡ್ ಗಳ ಸಮಯದಲ್ಲಿ ದೇಶದ ರಾಷ್ಟ್ರಪತಿಯಾಗುವವರು ಜೆ.ಎಸ್.ಖೇಹರ್!
ಒಟ್ಟಿನಲ್ಲಿ ಇಡಿ ದೇಶವೂ ಕಾತರದಿಂದ ಕಾಯುತ್ತಿರುವ ನೂತನ ರಾಷ್ಟ್ರಪತಿಯ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಮುನ್ನ ಇಂಥದೊಂದು ಅಚ್ಚರಿ ಘಟಸಿಹೋಗುವುದು ಬಹುಪಾಲು ಜನರಿಗೆ ತಿಳಿದಿಲ್ಲ!












Click it and Unblock the Notifications