ಸಿಐಎಸ್ ಎಫ್ ಗೆ ಅತ್ಯುತ್ತಮ ಏರ್ ಪೋರ್ಟ್ ಭದ್ರತೆ ಪ್ರಶಸ್ತಿ
ನವದೆಹಲಿ, ಜುಲೈ 3: ದೆಹಲಿ ವಿಮಾನ ನಿಲ್ದಾಣಕ್ಕೆ ಭದ್ರತೆ ನೀಡುತ್ತಿರುವ ದಿ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್ (CISF) ಅತ್ಯುತ್ತಮ ಏರ್ ಪೂರ್ಟ್ ಭದ್ರತೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವರ್ಲ್ಡ್ ಕ್ವಾಲಿಟಿ ಕಾಂಗ್ರೆಸ್ (WQC) ನೀಡುವ ಈ ಪ್ರಶಸ್ತಿಯನ್ನು ಜುಲೈ 6 ರಂದು ಮುಂಬೈಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ.

ವಿಶ್ವದ ಪ್ರಮುಖ ವಿಮಾನ ನಿಲ್ದಾಣಗಳಾದ ಹೀಥ್ರೋ, ದಲ್ಲಾಸ್, ಲಾಸ್ ಏಂಜಲೀಸ್, ದುಬೈ, ಪ್ಯಾರಿಸ್ ಗಳಿಗಿಂತ ಹೆಚ್ಚು ಭದ್ರತೆ ದೆಹಲಿ ವಿಮಾನ ನಿಲ್ದಾಣದಲ್ಲಿದೆ ಎಂದು ವರ್ಲ್ಡ್ ಕ್ವಾಲಿಟಿ ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿ ಈ ಪ್ರಶಸ್ತಿಯನ್ನು ನೀಡಿದೆ.












Click it and Unblock the Notifications