• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ತನ್ನ ಸಾಮರ್ಥ್ಯ ಮೀರಿ ವರ್ತಿಸುತ್ತಿದೆ: ಆರೆಸ್ಸೆಸ್ ಚಿಂತಕ

|

ನವದೆಹಲಿ, ಜೂನ್ 22: ಭಾರತ ಹಾಗೂ ಚೀನಾ ನಡುವೆ ಗಡಿ ಬಿಕ್ಕಟ್ಟು ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಸರಿಯಾಗಿ ಮಾತುಕತೆ ನಡೆಸದೆ, ವ್ಯವಹಾರ ಮಾಡದೆ ಚೀನಾ ತನ್ನ ಸಾಮರ್ಥ್ಯ ಮೀರಿ ಅತಿಯಾಗಿ ವರ್ತಿಸುತ್ತಿದೆ ಎಂದು ಆರ್.ಎಸ್.ಎಸ್ ಚಿಂತಕ ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

   Petrol ,diesel price increased for the 16th consecutive day | Oneindia Kannada

   ಚೀನಾದ ಜಿ.ಡಿ.ಪಿ.ಗೆ ಹೋಲಿಸಿದರೆ ಅದರ ಸಾಲದ ಪ್ರಮಾಣ ಶೇ.250ರಷ್ಟು ಹೆಚ್ಚಾಗಿದೆ. ಅಸ್ಥಿರವಾದ ಸಾಲದ ಮಟ್ಟ ಹಾಗೂ ಜಾಗತಿಕ ಮಾರುಕಟ್ಟೆಯನ್ನು ಅತಿಯಾಗಿ ಅವಲಂಬಿಸಿರು

   ವಾಗ, ಇಂತಹ ರಾಜಕೀಯ ಮಾಡಬಾರದು ಎಂದು ಗುರುಮೂರ್ತಿ ಹೇಳಿದ್ದಾರೆ.

   ಚೀನಾ ತನ್ನ ಸಾಮರ್ಥ್ಯವನ್ನು ಅತಿಯಾಗಿ ಬಳಸಿಕೊಳ್ಳುತ್ತಿದೆ. ಅದಕ್ಕೆ ತನ್ನ ಸಾಮರ್ಥ್ಯ ಬಳಸಿಕೊಳ್ಳುವ ರೀತಿ ಗೊತ್ತಿಲ್ಲ, ಚೀನಾದ ಸಾಮರ್ಥ್ಯವೇ ಅದರ ಅವನತಿಗೆ ನಾಂದಿ ಹಾಡಬಹುದು ಎಂದಿದ್ದಾರೆ.

   ಜೆಎನ್ ಯುನಲ್ಲಿ ನಡೆದ ಪ್ರೊ ಪಿ.ಎನ್ ಶ್ರೀವಾಸ್ತವ ಸ್ಮಾರಕ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿ ಗುರುಮೂರ್ತಿ, ಚೀನಾ ತನ್ನ ಆರ್ಥಿಕ ಬಲದಿಂದ ಜಗತ್ತಿನ ಇತರೆ ರಾಷ್ಟ್ರಗಳನ್ನು ಕಟ್ಟಿ ಹಾಕಬಹುದು ಎಂಬ ತಪ್ಪು ಎಣಿಕೆಯಲ್ಲಿದೆ. ಅತಿಯಾದ ಉತ್ಪದನಾ ಸಾಮರ್ಥ್ಯವನ್ನು ನಂಬಿಕೊಂಡಿರುವ ಚೀನಾಕ್ಕೆ ಸಾಲದ ಹೊರೆಯೂ ಹೆಚ್ಚಿದೆ. ಒಂದು ವೇಳೆ ಎಲ್ಲಾ ರಾಷ್ಟ್ರಗಳು ಚೀನಾದಿಂದ ರಫ್ತು ಪ್ರಮಾಣ ತಗ್ಗಿಸಿದರೆ, ಚೀನಾಕ್ಕೆ ಏಕಕಾಲಕ್ಕೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಹೇಳಿದರು.

   ಜೂನ್ 15/16ರಂದು ಲಡಾಕ್ ನ ಗಾಲ್ವಾನ್ ಕಣಿವೆ ಭಾಗದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕೌರ್ ಮೃತಪಟ್ಟಿದ್ದು, ಇದಾದ ಬಳಿಕ ಚೀನಾ ವಿರುದ್ಧ ಆರ್ಥಿಕ ಸಮರ ಸಾರಲು ಭಾರತ ಮುಂದಾಗಬೇಕು ಎಂಬ ಕೂಗೆದ್ದಿದೆ.

   English summary
   Amid the ongoing border row between New Delhi and Beijing, RSS ideologue Swaminathan Gurumurthy said on Saturday that China has overplayed its cards, unmindful of its highly indebted financial position.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X