ತಮಿಳಿನ "ಯೂತ್‌" ಸಿನಿಮಾವನ್ನು ಹಾಡಿ ಹೊಗಳಿದ ರಿಷಬ್‌ ಶೆಟ್ಟಿ; ನೀವು ಚಿತ್ರರಂಗದ ಆಸ್ತಿ ಎಂದು ನಟನಿಗೆ ಶ್ಲಾಘನೆ

ಕನ್ನಡ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಿತ್ರ 'ಯೂತ್' ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಪ್ರೀತಿ, ಸ್ನೇಹ ಮತ್ತು ಪೋಷಕರಿಗೆ ಅರ್ಪಿಸಲಾದ ಭಾವನಾತ್ಮಕ ಕಥೆಯನ್ನು ಹೊಂದಿದ್ದು, ರಿಷಬ್ ಶೆಟ್ಟಿ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.

ಬಹಳ ದಿನಗಳ ನಂತರ ನಗು ತಂದ ಸಿನಿಮಾ

ತಮ್ಮ ಪೋಸ್ಟ್‌ನಲ್ಲಿ ರಿಷಬ್ ಶೆಟ್ಟಿ, "ಬಹಳ ದಿನಗಳ ನಂತರ ಇಡೀ ಸಿನಿಮಾ ನೋಡುವಾಗ ನನ್ನ ಮುಖದಲ್ಲಿ ನಗು ಇತ್ತು. 'ಯೂತ್' ಸಿನಿಮಾ ಪ್ರೀತಿ, ಸ್ನೇಹ ಮತ್ತು ಆಳವಾದ ಭಾವನೆಗಳಿಂದ ಕೂಡಿದೆ. ಇದು ಎಲ್ಲ ಪೋಷಕರಿಗೆ ಅರ್ಪಿಸಲಾದ ಹೃದಯಸ್ಪರ್ಶಿ ಗೌರವ" ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿರುವ ಕೆನ್ ಕರುಣಾಸ್, ಈ ಚಿತ್ರದಲ್ಲಿ ಏಕಕಾಲಕ್ಕೆ ನಟನೆಯ ಜೊತೆಗೆ ಕಥೆ-ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರ ಈ ಬಹುಮುಖ ಪ್ರತಿಭೆಯನ್ನು ಕೊಂಡಾಡಿರುವ ರಿಷಬ್, "ಒಬ್ಬನೇ ವ್ಯಕ್ತಿ ಬರವಣಿಗೆ, ನಿರ್ದೇಶನ ಮತ್ತು ನಟನೆಯನ್ನು ಇಷ್ಟು ಸೂಕ್ಷ್ಮವಾಗಿ ನಿಭಾಯಿಸಿರುವುದು ನಿಜಕ್ಕೂ ಶ್ಲಾಘನೀಯ. ಕೆನ್, ನೀವು ಚಿತ್ರರಂಗದ ಆಸ್ತಿಯಾಗಲಿದ್ದೀರಿ" ಎಂದು ಬೆನ್ನು ತಟ್ಟಿದ್ದಾರೆ.

Rishab Shetty

ಚಿತ್ರತಂಡಕ್ಕೆ ಮೆಚ್ಚುಗೆ

ಚಿತ್ರದಲ್ಲಿ ನಟಿಸಿರುವ ಮಲಯಾಳಂನ ಖ್ಯಾತ ನಟ ಸುರಾಜ್ ವೆಂಜಾರಮೂಡು, ದೇವದರ್ಶಿನಿ ಮತ್ತು ಸ್ನೇಹಿತರ ತಂಡದ ನೈಜ ನಟನೆಯನ್ನು ರಿಷಬ್ ಶೆಟ್ಟಿ ವಿಶೇಷವಾಗಿ ಗುರುತಿಸಿದ್ದಾರೆ. ಅಲ್ಲದೆ ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್ ಅವರ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಾಹಕ ವಿಕ್ಕಿ ಅವರ ಕೆಲಸವನ್ನು ಸಹ ಹೊಗಳಿದ್ದಾರೆ.

15 ವರ್ಷದ ಹದಿಹರೆಯದ ಹುಡುಗ ಪ್ರವೀಣ್‌ನ ಮುಗ್ಧ ಪ್ರೀತಿ, ಹರೆಯದ ತುಂಟಾಟ ಮತ್ತು ಕೌಟುಂಬಿಕ ಒತ್ತಡಗಳ ಸುತ್ತ ಸಾಗುವ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವನ್ನು ಕೆನ್ ಕರುಣಾಸ್ ಅವರೇ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಯೂತ್' ಸಿನಿಮಾ ಮಾರ್ಚ್ 19ರಂದು ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಸದ್ಯ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಒಟಿಟಿಯಲ್ಲೂ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸುಮಾರು 80 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವುದಾಗಿ ವರದಿಯಾಗಿದೆ.

ತಮಿಳು ಚಿತ್ರರಂಗದಲ್ಲಿ ಸದ್ಯ ದೊಡ್ಡ ಸಂಚಲನ ಮೂಡಿಸಿರುವ 'ಯೂತ್' ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದೆ. ಕೇವಲ 6 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಬರೋಬ್ಬರಿ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 'ಬ್ಲಾಕ್‌ಬಸ್ಟರ್' ಪಟ್ಟಕ್ಕೇರಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿರುವ ಈ ಚಿತ್ರ, ಸಣ್ಣ ಬಜೆಟ್ ಸಿನಿಮಾಗಳು ಕಂಟೆಂಟ್ ಚೆನ್ನಾಗಿದ್ದರೆ ಹೇಗೆ ಇತಿಹಾಸ ಸೃಷ್ಟಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+