ಡ್ರಗ್ಸ್ ಪ್ರಕರಣ: ನಟಿ ಶ್ರದ್ಧಾ ಕಪೂರ್, ನೋರಾ ಫತೇಹಿ ಸೇರಿ ಹಲವರ ಹೆಸರು ಚಾರ್ಜ್‌ಶೀಟ್‌ನಿಂದ ಕೈಬಿಡುವ ಸಾಧ್ಯತೆ

ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದ 2022ರ ಮುಂಬೈ ಡ್ರಗ್ಸ್ ಸರಬರಾಜು ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್, ನೋರಾ ಫತೇಹಿ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳಿಗೆ ರಿಲೀಫ್‌ ಸಿಗುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸದ್ಯದಲ್ಲೇ ಸಲ್ಲಿಸಲಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರುಗಳನ್ನು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮುಂಬೈ ಪೊಲೀಸರ ಆಂಟಿ ನಾರ್ಕೋಟಿಕ್ಸ್ ಸೆಲ್ (ಎಎನ್‌ಸಿ) ನಡೆಸಿದ ತನಿಖೆಯಲ್ಲಿ, ಈ ಸೆಲೆಬ್ರಿಟಿಗಳಿಗೂ ಮತ್ತು ಡ್ರಗ್ಸ್ ಜಾಲಕ್ಕೂ ನೇರ ಸಂಬಂಧ ಇರುವುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗಿದೆ. ನಮಗೆ ಸದ್ಯದ ತನಿಖೆಯಲ್ಲಿ ಈ ಸೆಲೆಬ್ರಿಟಿಗಳನ್ನು ಪ್ರಕರಣಕ್ಕೆ ಲಿಂಕ್ ಮಾಡಲು ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ ಬಂಧಿತ ಆರೋಪಿಗಳು ಮತ್ತು ತಲೆಮರೆಸಿಕೊಂಡಿರುವವರ ವಿರುದ್ಧ ಮಾತ್ರ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Mumbai Drugs Case

ಏನಿದು ಪ್ರಕರಣ?

ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಶ್ರದ್ಧಾ ಕಪೂರ್, ನೋರಾ ಫತೇಹಿ, ಇನ್‌ಫ್ಲೂಯೆನ್ಸರ್ ಓರಿ ಮತ್ತು ರಾಜಕಾರಣಿ ಜೀಶನ್ ಸಿದ್ದಿಕಿ ಅವರ ಹೆಸರುಗಳು ಪ್ರಸ್ತಾಪವಾಗಿದ್ದವು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಲವಿಶ್ ಎಂಬಾತ ನಡೆಸುತ್ತಿದ್ದ ಡ್ರಗ್ ಪಾರ್ಟಿಗಳಲ್ಲಿ ಇವರೆಲ್ಲರೂ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಓರಿ ಮತ್ತು ಸಿದ್ದಾಂತ್ ಕಪೂರ್ ಸೇರಿದಂತೆ ಹಲವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದರು. 2022ರಲ್ಲಿ ಮೊಹಮ್ಮದ್ ಶಾರುಖ್ ಶೇಖ್ ಎಂಬಾತನಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ನಂತರ ಈ ಬೃಹತ್ ಜಾಲ ಪತ್ತೆಯಾಗಿತ್ತು. ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ತಾರೆಯರ ಹೆಸರುಗಳು ಕೇಳಿಬಂದಿದ್ದರೂ, ಕಾನೂನುಬದ್ಧವಾಗಿ ಅದನ್ನು ಸಾಬೀತುಪಡಿಸುವಂತಹ ದಾಖಲೆಗಳು ಪೊಲೀಸರಿಗೆ ಸಿಕ್ಕಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ ಮುಂಬೈ ಪೊಲೀಸರು ಈ ಸೆಲೆಬ್ರಿಟಿಗಳ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು ಸಲ್ಲಿಸಲಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಈ ಸೆಲೆಬ್ರಿಟಿಗಳ ಹೆಸರು ಇರುವುದಿಲ್ಲ ಎನ್ನಲಾಗಿದೆ. ಆರೋಪಿ ಲವಿಶ್ ನೀಡಿದ ಹೇಳಿಕೆಗಳನ್ನು ಹೊರತುಪಡಿಸಿ, ಇವರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಡಿಜಿಟಲ್ ಅಥವಾ ಭೌತಿಕ ದಾಖಲೆಗಳು ಸಿಕ್ಕಿಲ್ಲ. ಮುಂಬೈ ಪೊಲೀಸರ ಆಂಟಿ ನಾರ್ಕೋಟಿಕ್ಸ್ ಸೆಲ್ ಮುಂದಿನ ವಾರ ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಸೆಲೆಬ್ರಿಟಿಗಳಿಗೆ ಈ ಪ್ರಕರಣದಿಂದ ಮುಕ್ತಿ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಯಾರೆಲ್ಲರ ಹೆಸರು ತಳುಕು?

ಆರೋಪಿ ಲವಿಶ್ ತನ್ನ ಹೇಳಿಕೆಯಲ್ಲಿ ಕೇವಲ ಬಾಲಿವುಡ್ ತಾರೆಯರಲ್ಲದೆ, ಭೂಗತ ಲೋಕ ಮತ್ತು ರಾಜಕೀಯ ನಾಯಕರ ಹೆಸರುಗಳನ್ನೂ ಪ್ರಸ್ತಾಪಿಸಿದ್ದನು. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ಅವರ ಹೆಸರನ್ನೂ ಸಹ ಆರೋಪಿ ಲವಿಶ್ ಪ್ರಸ್ತಾಪಿಸಿದ್ದನು. ಆಕೆಯ ಕುಟುಂಬದ ನಿಕಟವರ್ತಿಗಳು ಅಥವಾ ಆಕೆಯ ವಲಯದಲ್ಲಿದ್ದವರು ಈ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಆತ ಹೇಳಿಕೊಂಡಿದ್ದನು. ಇನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಜೋಡಿ ಅಬ್ಬಾಸ್ ಮತ್ತು ಮಸ್ತಾನ್ ಅವರ ಹೆಸರುಗಳೂ ಈ ಪಟ್ಟಿಯಲ್ಲಿ ಕೇಳಿಬಂದಿದ್ದವು. ಎನ್‌ಸಿಪಿ (NCP) ನಾಯಕ ಮತ್ತು ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಅವರ ಹೆಸರನ್ನು ಲವಿಶ್ ಉಲ್ಲೇಖಿಸಿದ್ದನು. ಮ್ಯೂಸಿಕ್ ಇಂಡಸ್ಟ್ರಿಯ ರ್ಯಾಪರ್ ಲೋಕಾ ಕೂಡ ಈ ಡ್ರಗ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಆರೋಪಿ ತಿಳಿಸಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+