• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಪುತ್ರ ಅಮಿತ್ ಜೋಗಿ ಬಂಧನ

|

ನವದೆಹಲಿ, ಸೆಪ್ಟೆಂಬರ್ 3: ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಯನ್ನು ಫೋರ್ಜರಿ ಪ್ರಕರಣದಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಚುನಾವಣಾ ಅಫಿಡವಿಟ್‌ನಲ್ಲಿ ಅವರ ಊರು ಹಾಗೂ ಜನ್ಮ ವರ್ಷವನ್ನು ನಮೂದಿಸಿದ್ದ ಕಾರಣ ಅಮಿತ್ ಜೋಗಿ(42) ಅವರನ್ನು ಬಿಲಾಸ್‌ಪುರದಲ್ಲಿರುವ ನಿವಾಸದಲ್ಲೇ ಬಂಧಿಸಲಾಗಿದೆ.

ಅಂತಗ್ರಹ್ ಟೇಪ್ಸ್ ಪ್ರಕರಣ: ಮಾಜಿ ಸಿಎಂ ಅಜಿತ್ ಜೋಗಿ ವಿರುದ್ಧ ಎಫ್ಐಆರ್

ಬಿಜೆಪಿ ಮುಖಂಡರಾದ ಸಮೀರಾ ಪೈಕ್ರಾ ಅವರು ನೀಡಿದ್ದ ದೂರಿನ ಮೇರೆಗೆ ಅಮಿತ್ ಜೋಗಿಯವರನ್ನು ಬಂಧಿಸಲಾಗಿದೆ. ಸಮೀರಾ ಅವರು ಛತ್ತೀಸ್‌ಗಢದ ಮರ್ವಾಹಿ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಅಮಿತ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಅಮಿತ್ ಅವರು ತಮ್ಮ ಊರು, ಜನ್ಮ ವರ್ಷ ಹಾಗೂ ಅವರ ಜಾತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೋಗಿ ಅವರು 1978ರಲ್ಲಿ ಛತ್ತೀಸ್‌ಗಢದ ಸರ್ಬೆಹೆರಾ ಗೌರೇಲಾ ಪ್ರದೇಶದಲ್ಲಿ ಜನಿಸಿದ್ದಾಗಿ ಸುಳ್ಳು ಹೇಳಿದ್ದಾರೆ ಆದರೆ ಅವರು 1977ರಲ್ಲಿ ಟೆಕ್ಸಾಸ್‌ನಲ್ಲಿ ಹುಟ್ಟಿದ್ದಾರೆ ಎಂದು ಎಂದು ಸಮೀರಾ ದೂರಿದ್ದಾರೆ.

English summary
Chhattisgarh Former Ministers Son Arrested Amit Jogi, former MLA and the son of former Chhattisgarh Chief Minister Ajit Jogi, has been arrested from his home over allegations of cheating. He has been accused of lying on his election affidavit about his birthplace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X