ನೌಕರರಿಗೆ ಕೇಂದ್ರದಿಂದ ಭರ್ಜರಿ ಬೀಳ್ಕೊಡುಗೆ ಕೊಡುಗೆ

ಈ ಸಂಬಂಧ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (DoPT) ಈ ಆದೇಶ ಹೊರಡಿಸಿದೆ. ಪರಿಷ್ಕೃತ ಭತ್ಯೆ 2014 ಜನವರಿಯಿಂದಲೇ ಪೂರ್ವಾನ್ವಯವಾಗಲಿವೆ.
ಕೇಂದ್ರ ಸರಕಾರಿ ನೌಕರರ ಪ್ರತಿ ಮಗುವಿನ ಶೈಕ್ಷಣಿಕ ಭತ್ಯೆಯ (reimbursement) ವಾರ್ಷಿಕ ಮಿತಿಯನ್ನು 18,000 ರೂ. ಗೆ (ಮಾಸಿಕ 1,500 ರೂ.) ಹೆಚ್ಚಿಸಲಾಗಿದೆ. ಇದುವರೆಗೆ ಕೇಂದ್ರ ಸರಕಾರಿ ನೌಕರರ ಪ್ರತಿ ಮಗುವಿಗೆ ವಾರ್ಷಿಕ ಶೈಕ್ಷಣಿಕ ಭತ್ಯೆಯ ಮರುಪಾವತಿ ಮಿತಿಯನ್ನು 12,000 ರೂ.ಗೆ ನಿಗದಿ ಮಾಡಲಾಗಿತ್ತು.
ಜತೆಗೆ ವಿಕಲಚೇತನ/ ಅಶಕ್ತ ಮಹಿಳೆಯರ ಮಗು ಆರೈಕೆಗೆ ನೀಡಲಾಗುತ್ತಿದ್ದ ಮಾಸಿಕ ವಿಶೇಷ ಭತ್ಯೆಯನ್ನು 1,000 ರೂ. ನಿಂದ 1,500 ರೂ.ಗೆ ಹೆಚ್ಚಳ ಮಾಡಲಾಗಿದೆ.
ಸರಕಾರಿ ನೌಕರರ ವಿಕಲಚೇತನ ಮಕ್ಕಳ ವಾರ್ಷಿಕ ಶೈಕ್ಷಣಿಕ ಭತ್ಯೆಯ ವೆಚ್ಚ ಹಿಂಪಡೆಯುವ ಮಿತಿಯನ್ನು 36,000 ರೂ. (ಮಾಸಿಕ 3,000 ರೂ) ಗೆ ಪರಿಷ್ಕರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಏಪ್ರಿಲ್ 28ರಂದು ಹೊರಡಿಸಿರುವ ಆದೇಶ ತಿಳಿಸಿದೆ. ಈ ಹಿಂದೆ ವಿಕಲಚೇತನ ಮಕ್ಕಳ ಮಾಸಿಕ ಶೈಕ್ಷಣಿಕ ಭತ್ಯೆಯ ವೆಚ್ಚ ಹಿಂಪಡೆತ ಮಿತಿ 2,000 ರೂ. ಇತ್ತು.












Click it and Unblock the Notifications