• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ಯಾನ್-ಆಧಾರ್ ಸಂಖ್ಯೆ ಜೋಡಣೆ ಅವಧಿ ವಿಸ್ತರಣೆ

|

ನವದೆಹಲಿ, ಡಿಸೆಂಬರ್ 31: ಪ್ಯಾನ್ ಕಾರ್ಡ್‌ಗೆ ಆಧಾರ್ ಗುರುತಿನ ಸಂಖ್ಯೆಯನ್ನು ಜೋಡಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಸಿಬಿಡಿಟಿಯ ನೂತನ ಆದೇಶದ ಪ್ರಕಾರ ಪ್ಯಾನ್ ಕಾರ್ಡ್ ಬಳಕೆದಾರರು ಮಾರ್ಚ್ 31ರ ಒಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ಗುರುತಿನ ಸಂಖ್ಯೆಯನ್ನು ಜೋಡಿಸಬೇಕು ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ.

ಸಧ್ಯಕ್ಕೆ ಇಂದು ಅಂದರೆ ಡಿಸೆಂಬರ್ 31ರಂದು ಈ ಪ್ರಕ್ರಿಯೆಗೆ ಕೊನೆಯ ದಿನವಾಗಿತ್ತು. ಈ ಸಂಬಂಧ ಅವಧಿ ವಿಸ್ತರಣೆಯಾಗುತ್ತಿರುವುದು ಸತತ ಎರಡನೇ ಬಾರಿಯಾಗಿದೆ.

ಇನ್ನೂ ಸಾಕಷ್ಟು ಬಳಕೆದಾರರು ಆಧಾರ್ ಸಂಖ್ಯೆ ಜೋಡಣೆ ಮಾಡದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.

ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಡಿ.31ರ ಗಡುವು

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 ಎಎ(2) ಪ್ರಕಾರ ಎಲ್ಲಾ ಪ್ಯಾನ್ ಕಾರ್ಡ್ ಬಳಕೆದಾರರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು ಎಂದು 2017ರ ಜುಲೈ 1ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆಧಾರ್ ಜೋಡಣೆ ಪ್ರಕ್ರಿಯೆ ಸಂವಿಧಾನಾತ್ಮಕವಾಗಿದೆ, ತೆರಿಗೆದಾರರ ಹಕ್ಕುಗಳ ಉಲ್ಲಂಘನೆ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು.

ಸುಪ್ರೀಂಕೋರ್ಟ್‌ನ ಈ ಆದೇಶದ ಬಳಿಕ ಆಧಾರ್ ಜೋಡಣೆ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. ಆ ಗಡುವಿನ ಬಳಿಕವೂ ಅಷ್ಟೊಂದು ಜೋಡಣೆ ನಡೆಯದಿರುವ ಹಿನ್ನೆಲೆಯಲ್ಲಿ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು.

ನೋಟು ಅಮಾನ್ಯೀಕರಣದ ಬಳಿಕ ಕಪ್ಪು ಹಣ ವ್ಯವಹಾರ ನಿಯಂತ್ರಣ ಹಾಗೂ ನಕಲಿ ಪ್ಯಾನ್ ಕಾರ್ಡ್ ಬಳಕೆದಾರರನ್ನು ನಿರ್ಬಂಧಿಸುವುದಕ್ಕಾಗಿ ಆಧಾರ್ ಜೋಡಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

English summary
CBTD stated that Pan card-Aadhaar number linking deadline extended to march 31st 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X