ಜುಲೈ 1 ರಿಂದ ದೇಶಾದ್ಯಂತ ಸಿಬಿಎಸ್ಇ ಪರೀಕ್ಷೆ ಆರಂಭ

ದೆಹಲಿ, ಮೇ 8: ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ಸ್ಥಗಿತಗೊಂಡಿದ್ದ ಸಿಬಿಎಸ್ಇಯ 10ನೇ ಮತ್ತು 12ನೇ ಪರೀಕ್ಷೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ನೂತನ ದಿನಾಂಕ ಘೋಷಣೆಯಾಗಿದೆ.

Recommended Video

      ದಾವಣಗೆರೆ ಕೊರೊನ ಸೋಂಕಿಗೆ ಗುಜರಾತ್ ನಂಟು ? ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳೋದೇನು ?

      ಜುಲೈ 1 ರಿಂದ ಜುಲೈ 15ನೇ ತಾರೀಖಿನವರೆಗೂ ಸಿಬಿಎಸ್ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ನಡೆಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಸಚಿವ ರಮೇಶ್ ಫೋಕ್ರಿಯಾಲ್ ತಿಳಿಸಿದ್ದಾರೆ.

      ಈ ಹಿಂದೆ ನಿಗದಿಯಾದಂತೆ ಮಾರ್ಚ್ 19 ರಿಂದ ಮಾರ್ಚ್ 31ರವರೆಗೂ ಸಿಬಿಎಸ್ಇ ಪರೀಕ್ಷೆಗಳು ನಡೆಯಬೇಕಿತ್ತು. ಈ ಮಧ್ಯೆ ಕೊರೊನಾ ವೈರಸ್‌ ಹರಡುವಿಕೆ ಹೆಚ್ಚಾದ ಕಾರಣ ಪರೀಕ್ಷೆಗಳನ್ನು ಮುಂದೂಡಿಕೆಯಾಗಿತ್ತು.

      CBSE to conduct class 10th and 12th board exams from July 1st to July 15th

      ಇನ್ನು ಈಶಾನ್ಯ ದೆಹಲಿಯ ಗಲಭೆ ಹಿನ್ನೆಲೆ ಅಲ್ಲಿನ ಆಯ್ದ ಪ್ರದೇಶಗಳಲ್ಲಿ ಬಾಕಿ ಉಳಿದಿದ್ದ ಪರೀಕ್ಷೆಯನ್ನು ಹೊರತುಪಡಿಸಿ, ದೇಶಾದ್ಯಂತ ಸಿಬಿಎಸ್ಇ 10ನೇ ಹಾಗೂ 12 ನೇ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದೆ.

      ಇನ್ನುಳಿದಂತೆ ಜೆಇಇ (ಮೇನ್ಸ್) ಪರೀಕ್ಷೆಯನ್ನು ಜುಲೈ 18 ರಿಂದ ಜುಲೈ 23ರವರೆಗೂ ನಡೆಸುವುದಾಗಿ ಈಗಾಗಲೇ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಇಲಾಖೆ ಘೋಷಿಸಿದೆ. ನೀಟ್‌ ಪರೀಕ್ಷೆಗಳನ್ನು ಜುಲೈ 26 ರಂದು ನಡೆಸಲು ತೀರ್ಮಾನಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+