CBSE Board Exams 2023 : ಬೋರ್ಡ್ ಪರೀಕ್ಷೆಗಳಿಗೆ 2023ರ ಪಠ್ಯಕ್ರಮ ಬಿಡುಗಡೆ: ವಿಷಯಗಳು ಯಾವವು?
ನವದೆಹಲಿ, ಏಪ್ರಿಲ್ 22: ಸಿಬಿಎಸ್‌ಇಯ ವಿದ್ಯಾರ್ಥಿಗಳ ತರಗತಿಗಳು ಆರಂಭವಾಗಿಲದ್ದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಶುಕ್ರವಾರ 2022-23 ವಾರ್ಷಿಕ ವರ್ಷದ 9,10,11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ಸಿಬಿಎಸ್‌ಸಿಯ ವಿದ್ಯಾರ್ಥಿಗಳ ವಾರ್ಷಿಕ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ.
ಸಿಬಿಎಸ್‌ಇಯ ತರಗತಿಗಳ 10, 12 ಬೋರ್ಡ್ ಪರೀಕ್ಷೆಗಳಿಗೆ 2022-23 ಪರಿಷ್ಕೃತ ಪಠ್ಯಕ್ರಮವನ್ನು ಅಧಿಕೃತ ವೆಬ್‌ಸೈಟ್ cbseacademic.nic.inನಲ್ಲಿ ಕಾಣಬಹುದು ಇನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cbseacademic.nic.inನಲ್ಲಿ ಲಭ್ಯವಿರುವ ಪಠ್ಯಕ್ರಮವನ್ನು ಡೌನ್‌ಲೋಡ್ ಕೂಡ ಮಾಡಬಹುದು.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಬೋರ್ಡ್ ಪರೀಕ್ಷೆ 2022 ಪಠ್ಯಕ್ರಮವನ್ನು 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ ಪಠ್ಯಕ್ರಮವು ಪ್ರಮುಖ ವಿಷಯಗಳಿಗೆ ಈ ವರ್ಷ ಮತ್ತಷ್ಟು ಕಡಿತವನ್ನುಕಂಡಿದ್ದು ಈ ವರ್ಷವೂ ಸೀಮಿತವಾದ ಅಧ್ಯಾಯಗಳ ಪ್ರಮಾಣವನ್ನು ಇರಿಸಲು ಮಂಡಳಿಯು ನಿರ್ಧರಿಸಿದೆ.

ಇನ್ನು ಶಿಕ್ಷಕರು ಪ್ರತಿಕ್ರಿಯೆ ನೀಡಿದ್ದು ನಿಜವಾದ ಕಡಿತದ ಕುರಿತು ವಿವರಗಳನ್ನು ಕೆಲವು ಅಧ್ಯಾಯಗಳು ಮತ್ತು ಘಟಕಗಳನ್ನು ತೆಗೆದು ಹಾಕಲಾಗಿದೆ ಮತ್ತು ಕೆಲವು ಮತ್ತೆ ಸೇರಿಸಲಾಗಿದೆ ಎಂದು ಶಿಕ್ಷಕರು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಪಠ್ಯಕ್ರಮದ ಕುರಿತು 30 ಪ್ರತಿಶತ ಕಡಿತವನ್ನು ಸಿಬಿಎಸ್‌ಇ ಮಂಡಳಿಯು ನಿರ್ವಹಿಸುತ್ತದೆ.

CBSEಯಿಂದ ಬಿಡುಗಡೆಯಾದ ಪಠ್ಯಕ್ರಮಗಳ ವಿಷಯಗಳು
CBSE 9-10ನೇ ತರಗತಿಗಳ ಪಠ್ಯಕ್ರಮ 2022-23
ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ
ಹಿಂದಿ ಕೋರ್ಸ್ ಎ ಮತ್ತು ಹಿಂದಿ ಕೋರ್ಸ್ ಬಿ
ಗಣಿತಶಾಸ್ತ್ರ
ವಿಜ್ಞಾನ
ಸಾಮಾಜಿಕ ಅಧ್ಯಯನಗಳು
CBSE ತರಗತಿಗಳ 11-12 ಪಠ್ಯಕ್ರಮ 2022-23
ಅಕೌಂಟೆನ್ಸಿ
ಜೀವಶಾಸ್ತ್ರ
ವ್ಯಾಪಾರ ಅಧ್ಯಯನಗಳು
ರಸಾಯನಶಾಸ್ತ್ರ
ಅರ್ಥಶಾಸ್ತ್ರ
ಭೂಗೋಳಶಾಸ್ತ್ರ
ಇತಿಹಾಸ
ಗಣಿತಶಾಸ್ತ್ರ
ಅನ್ವಯಿಕ ಗಣಿತ
ದೈಹಿಕ ಶಿಕ್ಷಣ
ಭೌತಶಾಸ್ತ್ರ
ರಾಜ್ಯಶಾಸ್ತ್ರ
ಮನೋವಿಜ್ಞಾನ












Click it and Unblock the Notifications