ಅರವಿಂದ್ ಕೇಜ್ರಿವಾಲ್ ಪರಮಾಪ್ತನನ್ನು ಬಂಧಿಸಿದ ಸಿಬಿಐ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 04: ದೆಹಲಿ ಮುಖ್ಯಮಂತ್ರಿ ಆರವಿಂದ್ ಕೇಜ್ರಿವಾಲ್ ಅವರ ಪರಮಾಪ್ತ ಅಧಿಕಾರಿ (Principal Secretary) ರಾಜೇಂದ್ರ ಕುಮಾರ್ ಅವರನ್ನು ಸಿಬಿಐ ತಂಡ ಸೋಮವಾರ ಸಂಜೆ ಬಂಧಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.

ಕಳೆದ ವರ್ಷ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕಚೇರಿ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಕಚೇರಿ ಮೇಲೆ ದಾಳಿ ನಡೆಸಿದ್ದ ಸಿಬಿಐ ತಂಡ, ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

CBI arrests Kejriwal's principal secretary Rajender Kumar

ಆಶೀಶ್ ಜೋಶಿ ಎಂಬ ಅಧಿಕಾರಿ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಸಿಬಿಐ ತಂಡ ನೇರವಾಗಿ ಕೇಜ್ರಿವಾಲ್ ಅವರ ಆಪ್ತ ರಾಜೇಂದ್ರ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಿತ್ತು.

ದೆಹಲಿ ಸರ್ಕಾರದ ಅನೇಕ ಯೋಜನೆಗಳನ್ನು ಬೇನಾಮಿ ಕಂಪನಿಗಳಿಗೆ ಯಾವುದೇ ಟೆಂಡರ್ ಕರೆಯದೆ ಮಂಜೂರು ಮಾಡಿದ ಆರೋಪ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The central bureau of investigation today arrested Rajender Kumar the Principal Secretary to the Delhi Chief Minister Arvind Kejriwal. The CBI had carried out searches at the Delhi secretariat last year in connection with a corruption case. The agency had also slapped corruption charges against Kumar.
Please Wait while comments are loading...