ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸು ಕಳ್ಳಸಾಗಣೆದಾರರಿಂದ ಬಿಎಸ್‌ಎಫ್ ಯೋಧರ ಮೇಲೆ ಗುಂಡಿನ ದಾಳಿ

|
Google Oneindia Kannada News

ನವದೆಹಲಿ,ಫೆಬ್ರವರಿ 22: ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಮೇಲೆ ಗೋ ಕಳ್ಳಸಾಗಣೆದಾರರು ಗುಂಡಿನ ದಾಳಿ ನಡೆಸಿದ್ದಾರೆ.

ಭಾರತದಿಂದ ಬಾಂಗ್ಲಾದೇಶಕ್ಕೆ ದನಗಳು ಕಳ್ಳಸಾಗಣೆ ಮಾಡಲು ಎರಡೂ ಕಡೆಯವರು ಪ್ರಯತ್ನಿಸುತ್ತಿದ್ದರು.ಇವರನ್ನು ಚದುರಿಸಲು ಸೈನಿಕರು ಗ್ರೆನೇಡ್ ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ರೌಡಿಶೀಟರ್ ದೀಪು ಕಾಲಿಗೆ ಪೊಲೀಸ್ ಗುಂಡೇಟು ಶಿವಮೊಗ್ಗದಲ್ಲಿ ರೌಡಿಶೀಟರ್ ದೀಪು ಕಾಲಿಗೆ ಪೊಲೀಸ್ ಗುಂಡೇಟು

ಕೂಚ್ ಬೆಹಾರ್ ಜಿಲ್ಲೆಯ ಫಲಕತಾ ಸೆಕ್ಟರ್‌ನ ಪುತಿಯಾ ಬಾರಾಮಾಸಿಯಾ ಗಡಿ ಪೋಸ್ಟ್‌ಬಳಿ ಭಾನುವಾರ ಬೆಳಗಿನ ಜಾವ 5.30ರವೇಳೆಗೆ ಗುಂಡಿನ ದಾಳಿ ನಡೆದಿದೆ.

Cattle Smugglers Fire At BSF Troops Along India-Bangladesh Border In West Bengal

ಭಾರತ ಮೂಲದ ಕಳ್ಳಸಾಗಣೆದಾರರು ಬಿಎಸ್‌ಎಫ್ ಯೋಧರ ಮೇಲೆ ಗುಂಡು ಹಾರಿಸಿದರು. ತಕ್ಷಣ ಬಿಎಸ್‌ಎಫ್ ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಹೆದರಿದ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಬಾಂಗ್ಲಾದೇಶದಿಂದ 20-25 ದುಷ್ಕರ್ಮಿಗಳು ಮತ್ತು ಭಾರತದ ಕಡೆಯಿಂದ 18-20 ಕಳ್ಳಸಾಗಣೆದಾರರ ಅನುಮಾನಾಸ್ಪದ ಚಲನೆಯನ್ನು ಬಿಎಸ್‌ಎಫ್ ಯೋಧರು ಗಮನಿಸಿದ್ದರು.

English summary
Cross-border cattle smugglers fired at a BSF party along the India-Bangladesh international border in West Bengal in the early hours of Monday, officials said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X