ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾವಲಂಬಿ ಭಾರತಕ್ಕಾಗಿ ದೇಶಿಯವಾಗಲು ಹೊರಟ ಪೊಲೀಸ್ ಪಡೆ.!

|
Google Oneindia Kannada News

ನವದೆಹಲಿ, ಮೇ 13: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆಯಷ್ಟೇ ಭಾರತವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಕೋವಿಡ್-19 ವಿರುದ್ಧದ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಮೋದಿ ಘೋಷಿಸಿದ್ದರು.

ಹಾಗೇ, ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಸ್ವದೇಶಿ ಮಾರುಕಟ್ಟೆಯನ್ನು ಬಲಪಡಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಮಂತ್ರವನ್ನು ಜಪಿಸಿದ ಬಳಿಕ ಕೇಂದ್ರ ಗೃಹಸಚಿವಾಲಯ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಕರೆ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಕರೆ

ಜೂನ್ 1 ರಿಂದ ಆರಂಭಗೊಳ್ಳುವಂತೆ ಸಶಸ್ತ್ರ ಪೊಲೀಸ್ ಪಡೆ (ಸಿ.ಎ.ಪಿ.ಎಫ್) ಕ್ಯಾಂಟೀನ್‌ ಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಗೃಹ ಸಚಿವಾಲಯ ತೀರ್ಮಾನಿಸಿದೆ.

CAPFs Canteens To Sell Only Indigenous Products From June 1: Amit Shah

ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ''ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸಲು ಮನವಿ ಮಾಡಿದ್ದರು. ಇದು ಮುಂದಿನ ದಿನಗಳಲ್ಲಿ ಜಗತ್ತನ್ನು ಭಾರತ ಮುನ್ನಡೆಸಲು ಖಂಡಿತವಾಗಿಯೂ ದಾರಿ ಮಾಡಿಕೊಡುತ್ತದೆ'' ಎಂದಿದ್ದಾರೆ.

ಜೊತೆಗೆ, ''ಈ ದಿಕ್ಕಿನಲ್ಲಿ, ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿ.ಎ.ಪಿ.ಎಫ್) ಕ್ಯಾಂಟೀನ್‌ ಗಳು ಈಗ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಗೃಹ ಸಚಿವಾಲಯ ನಿರ್ಧರಿಸಿದೆ. ಇದು 2020 ರ ಜೂನ್ 01 ರಿಂದ ದೇಶದಾದ್ಯಂತ ಇರುವ ಎಲ್ಲಾ ಸಿ.ಎ.ಪಿ.ಎಫ್ ಕ್ಯಾಂಟೀನ್‌ ಗಳಿಗೆ ಅನ್ವಯಿಸುತ್ತದೆ. ಇದು ಸುಮಾರು 10 ಲಕ್ಷ ಸಿ.ಎ.ಪಿ.ಎಫ್ ಸಿಬ್ಬಂದಿಗಳನ್ನೊಳಗೊಂಡ 50 ಲಕ್ಷ ಕುಟುಂಬಗಳು ಸ್ಥಳೀಯ ವಸ್ತುಗಳನ್ನು ಬಳಸಲು ಸಹಕಾರಿಯಾಗಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವಾಲಯದ ಈ ನಿರ್ಧಾರ.. ಸರ್ಕಾರದ ಇತರೆ ಇಲಾಖೆಗಳಿಗೂ ಮಾದರಿಯಾಗಿದೆ.

English summary
CAPF's Canteens To Sell Only Indigenous Products From June 1 Says Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X