53 ಸಾವಿರ ಮನೆ ಬಾಡಿಗೆ ಕಡಿಮೆ ಮಾಡಿ ಎಂದಿದ್ದ ಪ್ರಿಯಾಂಕಾ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 16 : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮನೆ ಬಾಡಿಗೆ ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. 53 ಸಾವಿರ ರೂ. ಬಾಡಿಗೆಯನ್ನು 8,888 ರೂ.ಗಳಿಗೆ ಇಳಿಸುವಂತೆ ಪ್ರಿಯಾಂಕಾ ಅವರು 2002ರಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಈಗ ಬಹಿರಂಗವಾಗಿದೆ.

ನೋಯ್ಡಾದ ಮಾಹಿತಿ ಹಕ್ಕು ಕಾರ್ಯಕರ್ತ ರೇವ್ ಆಶಿಶ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. 2002ರ ಮೇ 7ರಂದು ಪ್ರಿಯಾಂಕಾ ಅವರು ಈ ಕುರಿತು ವಾಜಪೇಯಿ ಸರ್ಕಾರಕ್ಕೆ ಪತ್ರ ಬರೆದಿದ್ದರು. [ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದ ಇಂದಿರಾ ಗಾಂಧಿ!]

priyanka gandhi

2,765.18 ಚದರ ಮೀಟರ್‌ಗಳ ಮನೆಗೆ ನೀಡುತ್ತಿರುವ 53,421 ರೂ.ಗಳ ಬಾಡಿಗೆ ಹೆಚ್ಚಾಗಿದೆ. ಇದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು, ಆದ್ದರಿಂದ ಬಾಡಿಗೆಯನ್ನು 8,888 ರೂ.ಗಳಿಗೆ ಇಳಿಸುವಂತೆ ಅವರು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದರು. ['ಪ್ರಿಯಾಂಕಾ ಗಾಂಧಿ ಕರೆ ತನ್ನಿ ಕಾಂಗ್ರೆಸ್ ಉಳಿಸಿ']

ಎಸ್‌ಪಿಜಿ ಮುಖ್ಯಸ್ಥರ ಮನವಿ ಮೇರೆಗೆ ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಂಡಿದ್ದೇವೆ. ಈ ಬಂಗಲೆಯ ದೊಡ್ಡಭಾಗವನ್ನು ಎಸ್‌ಪಿಜಿ ಬಳಸಿಕೊಳ್ಳುತ್ತಿದೆ. ನಾವು ಹೊಸ ಬಾಡಿಗೆ 53,421 ರೂ.ಗಳನ್ನು ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಲ್ಲದೇ ಹಿಂದೆ ನೀಡುತ್ತಿದ್ದಂತೆ 28,451 ರೂ. ಬಾಡಿಗೆಯನ್ನು ಪಾವತಿ ಮಾಡುವುದಾಗಿಯೂ ತಿಳಿಸಿದ್ದರು. 2004ರ ಜನವರಿ 31ರ ತನಕ 3.76 ಲಕ್ಷ ರೂ. ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು. [ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಿನ್ನೆಲೆ ಇದು]

ಸದ್ಯ, ಪ್ರಿಯಾಂಕ ಗಾಂಧಿ ಅವರು ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದಕ್ಕೆ 31,300 ರೂ. ಬಾಡಿಗೆ ನೀಡುತ್ತಿದ್ದಾರೆ. 2012ರ ನಂತರ ಭದ್ರತಾ ಕಾರಣಗಳಿಂದಾಗಿ ಪ್ರಿಯಾಂಕಾ ಅವರಿಗೆ ಈ ಬಂಗಲೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಿಯಾಂಕಾ ಗಾಂಧಿ ಪಂಜಾಬ್‌ನ ಮಾಜಿ ಡಿಐಜಿ ಕೆಪಿಎಸ್ ಗಿಲ್, ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಎಂ.ಎಸ್.ಬಿಟ್ಟಾ ಹಾಗೂ ಪಂಜಾಬ್ ಕೇಸರಿ ಪತ್ರಿಕೆ ಸಂಪಾದಕ ಅಶ್ವಿನ್ ಪ್ರಸಾದ್ ಅವರಿಗೆ 2012ರಲ್ಲಿ ಲೋಧಿ ಎಸ್ಟೇಟ್‌ನಲ್ಲಿರುವ ಬಂಗಲೆಯಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Priyanka Gandhi Vadra had negotiated the monthly rent to her sprawling bungalow in Lutyens Delhi to a mere Rs 8,888. Some 14 years ago Priyanka had written to the government in May 2002, saying that Rs 53,421 was too high an amount for her to pay since it was beyond her paying capacity.
Please Wait while comments are loading...