ಜನರ ನಿರೀಕ್ಷೆಗಳಿಗೆ ಪೂರಕವಾಗಿರಲಿದೆ ಈ ಬಜೆಟ್; ಅನುರಾಗ್ ಠಾಕೂರ್

ನವದೆಹಲಿ, ಫೆಬ್ರುವರಿ 01: ಇಂದು ಮಂಡನೆಯಾಗಲಿರುವ 2021-22 ಕೇಂದ್ರ ಬಜೆಟ್ ಜನರ ನಿರೀಕ್ಷೆಗಳಿಗೆ ತಕ್ಕಂತೆ ಇರಲಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ.

ಸರ್ಕಾರವು ಸ್ವಾವಲಂಬಿ ಭಾರತ ಹಾಗೂ ಅದರ ಆರ್ಥಿಕತೆ ಬೆಳವಣಿಗೆಯ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

"ಜನರ ನಿರೀಕ್ಷೆಗಳನ್ನು ಈ ಬಜೆಟ್ ಪೂರೈಸಲಿದೆ. "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್" ಮೋದಿ ಸರ್ಕಾರದ ಗುರಿಯಾಗಿದೆ. ಈ ಮಂತ್ರದ ಮೇಲೆ ಕೆಲಸ ಮಾಡುತ್ತಿರುವ ಸರ್ಕಾರ, ಆತ್ಮನಿರ್ಭರ ಪ್ಯಾಕೇಜ್ ನೊಂದಿಗೆ ಹೊಸ ದಾರಿಯಲ್ಲಿ ಸಾಗಲಿದೆ. ಕೊರೊನಾ ಸೋಂಕಿನಿಂದ ದೇಶವನ್ನು ರಕ್ಷಿಸುತ್ತಾ, ಮತ್ತೆ ಆರ್ಥಿಕತೆಯನ್ನು ಮೊದಲ ದಾರಿಗೆ ತರುವತ್ತ ಚಿಂತಿಸುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ" ಎಂದು ಠಾಕೂರ್ ಹೇಳಿದ್ದಾರೆ.

Budget Will Be In Accordance With Peoples Expectation Said Anurag Thakur

"ಜನರ ಭರವಸೆಗಳನ್ನು ಈ ಬಜೆಟ್ ಪೂರೈಸಲಿರುವ ಆತ್ಮವಿಶ್ವಾಸ ನನ್ನಲ್ಲಿದೆ. ಸ್ವಾವಲಂಬಿ ಹಾದಿಯಲ್ಲಿ ಆರ್ಥಿಕ ಉನ್ನತಿ ಸಾಧಿಸುವ ನಮ್ಮ ಶ್ರಮವನ್ನು ನಿರಂತರವಾಗಿ ಮುಂದುವರೆಸುತ್ತೇವೆ" ಎಂದು ಭರವಸೆ ನೀಡಿದರು.

ಇಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಠಾಕೂರ್ ಇದಕ್ಕೂ ಮುನ್ನ ತಮ್ಮ ಮನೆಯಲ್ಲಿ ಪೂಜೆ ನೆರವೇರಿಸಿದರು. ಕೊರೊನಾ ಸೋಂಕಿನಿಂದ ದೇಶ ಹೊರಬರುತ್ತಿರುವ ಈ ಸಮಯದಲ್ಲಿ ಕೇಂದ್ರ ಬಜೆಟ್ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳೂ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+