ಬಜೆಟ್ 2019: ಸ್ಟಾರ್ಟ್ ಅಪ್‌ಗೆ ತಲೆನೋವಾಗಿದ್ದ ಏಂಜಲ್ ಟಾಕ್ಸ್ ರದ್ದು
ನವದೆಹಲಿ, ಜುಲೈ 05: ಸ್ಟಾರ್ಟ್ ಅಪ್‌ಗಳಿಗೆ ತಲೆನೋವಾಗಿದ್ದ ಏಂಜಲ್ ಟ್ಯಾಕ್ಸ್ ಅನ್ನು ತೆಗೆದು ಹಾಕಿರುವುದಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಏಂಜಲ್ ಟ್ಯಾಕ್ಸ್ ತೆಗೆದುಹಾಕುವಂತೆ ಈ ಹಿಂದೆ ರಾಹುಲ್ ಗಾಂಧಿ ಅವರು ಸಹ ಒತ್ತಾಯಿಸಿದ್ದು, ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯಲ್ಲೂ ಸಹ ಇದನ್ನು ಸೇರಿಸಲಾಗಿತ್ತು. ಆದರೆ ಇದನ್ನು ತೆಗೆದು ಹಾಕಿ ಸ್ಟಾರ್ಟ್ ಅಪ್ ಗುರಿ ಹೊಂದಿದವರಿಗೆ ಕೇಂದ್ರವು ನಿರಾಳಗೊಳಿಸಿದೆ.
ಬಜೆಟ್ ಭಾಷಣದ ಸಂದರ್ಭದಲ್ಲಿಯೂ ಇದನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್ ಅವರು, ಏಂಜಲ್ ಟ್ಯಾಕ್ಸ್ ಅನ್ನು ರದ್ದು ಮಾಡಲಾಗಿದ್ದು, ಈ ವಿಷಯ ಸದನದ ಒಳಗಿನ ಕೆಲವರಿಗೆ ಸಂತೋಶ ತಂದಿರಬಹುದು ಎಂದು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಏಂಜಲ್ ಟ್ಯಾಕ್ಸ್ ರದ್ದು ಮಾತ್ರವಲ್ಲದೆ, ಸ್ಟಾರ್ಟ್ ಅಪ್ ಸ್ಥಾಪಿಸುವವರಿಗೆ ತೆರಿಗೆ ತನಿಖೆಯಿಂದಲೂ ವಿನಾಯಿತಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.












Click it and Unblock the Notifications