ಬ್ರಿಟಿಶ್ ನಾಗರಿಕತ್ವ: ರಾಹುಲ್ ಗಾಂಧಿ ಗೆ ಸುಪ್ರೀಂನಿಂದ ಬಿಗ್ ರಿಲೀಫ್

ನವದೆಹಲಿ, ಮೇ 09: ಬ್ರಿಟಿಶ್ ನಾಗರಿತ್ವವನ್ನು ಸ್ವಇಚ್ಛೆಯಿಂದ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ.

ಬ್ರಿಟಿಶ್ ನಾಗರಿಕತ್ವ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾ ಆಯೋಗ ತಡೆ ಒಡ್ಡುವಂತೆ, ಸುಪ್ರೀಂ ಕೋರ್ಟ್ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅದರೆ ಅದನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ಇಂಗ್ಲೆಂಡ್ ನಲ್ಲಿ 2003 ರಲ್ಲಿಬ್ಯಾಕಾಪ್ಸ್ ಲಿ. ಎಂಬ ಹೆಸರಿನಲ್ಲಿ ಕಂಪನಿಯೊಂದನ್ನು ರಿಜಿಸ್ಟರ್ ಮಾಡಲಾಗಿದೆ. ಆ ಕಂಪನಿಗೆ ರಾಹುಲ್ ಗಾಂಧಿ ಸಹ ಒಬ್ಬ ನಿರ್ದೇಶಕರು ಮತ್ತು ಕಾರ್ಯದರ್ಶಿ. ಅವರು ಕಂಪನಿಗೆ ನೀಡಿದ ಜನ್ಮ ವಿವರದಲ್ಲಿ ತಮ್ಮ ರಾಷ್ಟ್ರೀಯತೆಯನ್ನು 'ಬ್ರಿಟಿಶ್' ಎಂದು ಘೋಷಿಸಿದ್ದರು. 17/02/2009 ರ ಈ ಕಂಪನಿಯ ದಾಖಲೆಗಳಲ್ಲೂ ಅವರದು ಬ್ರಿಟಿಶ್ ನಾಗರಿಕತ್ವ ಎಂದೇ ಉಲ್ಲೇಖಿಸಲಾಗಿದೆ. ಈ ಕುರಿತು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.

British citizenship issue: Big relief to Rahul Gandhi from SC

ರಾಹುಲ್ ಗಾಂಧಿ ಅವರು ಆ ಕಂಪನಿಗೆ ನೀಡಿದ ಜನ್ಮ ವಿವರಗಳಿಗೂ ಮತ್ತು ಅಮೇಥಿಯಲ್ಲಿ ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡವಿಟ್ ನಲ್ಲಿರುವ ವಿದ್ಯಾರ್ಹತೆಯ ವಿವರಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂದು ದೂರಲಾಗಿತ್ತು.

ಇದಕ್ಕೂ ಮುನ್ನ ಅಮೇಥಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲೂ ಇದೇ ರೀತಿ ಅರ್ಜಿ ಸಲ್ಲಿಸಲಾಗಿತ್ತು, ಆ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದ್ದರಿಂದ ಅವರ ಸ್ಪರ್ಧೆಯನ್ನು ಮಾನ್ಯ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+