ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಂಕಿಪಾಕ್ಸ್‌: ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ

|
Google Oneindia Kannada News

ನವದೆಹಲಿ ಜುಲೈ 18: ವಿದೇಶಗಳಿಂದ ಬಂದವರ ಭಾರತ ಇಬ್ಬರಲ್ಲಿ ಮಂಕಿಫಾಕ್ಸ್ ವೈರಸ್ ದೃಢಪಟ್ಟ ಹಿನ್ನೆಲೆ ಕೇಂದ್ರ ಸರ್ಕಾರ ಮುಂಜಾಗೃತಾ ದೃಷ್ಟಿಯಿಂದ ದೇಶಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚಿಸಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳು ಸೇರಿದಂತೆ ವಿದೇಶಗಳಿಂದ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಸೋಮವಾರ ಸೂಚಿಸಲಾಗಿದೆ.

Breaking: Monkeypox: Central advice to screen international passengers

ಈಗಾಗಲೇ ವಿದೇಶದಿಂದ ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಕೇರಳದ ತಿರುವನಂತಪುರಕ್ಕೆ ತೆರಳಿದ್ದ ವ್ಯಕ್ತಿಗೆ ಮೊದಲ ಬಾರಿಗೆ ಮಂಕಿಫಾಕ್ಸ ಕಾಣಿಸಿಕೊಂಡಿತ್ತು. ಇದು ದೇಶದ ಮೊದಲ ಪ್ರಕರಣವೂ ಆಗಿದೆ. ಅಲ್ಲದೇ ಸೋಮವಾರ ಮತ್ತೆ ಕೇರಳದಲ್ಲೇ ಮತ್ತೊಬ್ಬರಿಗೆ ಮಂಕಿಫಾಕ್ಸ ದೃಢಪಟ್ಟಿದ್ದು, ಇದು ಜನರ ಆತಂಕಕ್ಕೆ ಕಾರಣವಾಗಿದೆ.

Breaking: Monkeypox: Central advice to screen international passengers

ಈ ಕಾರಣದಿಂದ ಕೇಂದ್ರ ಸರ್ಕಾರ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷಿಸುವಂತೆ ತಾಕೀತು ಮಾಡಿದೆ. ಈ ಮೂಲಕ ಭಾರತ ಮಂಕಿಫಾಕ್ಸ್ ಅನ್ನು ಆರಂಭದಲ್ಲೇ ನಿಯಂತ್ರಿಸಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ.

ಪ್ರಯಾಣಿಕರ ತಪಾಸಣೆ ಮಾರ್ಗಸೂಚಿಗಳು ಏನೇನು?
ಮಂಕಿಫಾಕ್ಸ್ ಹೆಚ್ಚಾಗುತ್ತಿದ್ದಂತೆ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ಕುರಿತು ಕಟ್ಟುನಿಟ್ಟಿನ ಸೂಚನೆ ಮಾಡುವ ಜತೆಗೆ ಒಂದಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯವಿರುವ ಪ್ರಯಾಣಿಕರ ಜತೆಗೆ ನಿಕಟ ಸಂಬಂಧ ಹೊಂದಿರಬಾರದು. ಇಲಿಗಳು, ಅಳಿಲುಗಳು, ಮಂಗಗಳು ಮತ್ತು ಸ್ತನಿಗಳ ಸೇರಿದಂತೆ ಅಥವಾ ಸತ್ತ ಹಾಗೂ ಜೀವಂತ ಪ್ರಾಣಿಗಳಿಂದ ದೂರವಿರಬೇಕು. ಆಫ್ರಿಕಾ ಸೇರಿದಂತೆ ಇತರ ದೇಶಗಳ ಕಾಡು ಪ್ರಾಣಿಗಳಿಂದ ಉತ್ಪಾದಿಸಿ ಉತ್ಪನಗಳಾದ ಕ್ರೀಮ್, ಲೋಷನ್ ಗಳನ್ನು ಬಳಸಬಾರದು, ಅಲ್ಲಿಂದ ತರಬಾರದು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ಯಾರಿಗಾದರೂ ಮಂಕಿಫಾಕ್ಸ್ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಿರಿ ಮತ್ತು ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ. ಜತೆಗೆ ತಮ್ಮ ಸಂಪರ್ಕಿತರ ಕುರಿತು ಆರೋಗ್ಯ ಕೇಂದ್ರ ಇಲ್ಲವೇ ಇಲಾಖೆ ತಿಳಿಸಿದೆ. ಅಲ್ಲದೇ ಈ ರೋಗ ಸಿಡುಬು ರೋಗಿಗಳಲ್ಲಿ ಕಂಡು ಬರುವ ಲಕ್ಷಣಗಳನ್ನು ಹೊಂದಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
After Monkeypox case found in Kerala, the Union government has suggested mandatory screening of international passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X