ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಲು ಬಿಜೆಪಿ ಟೋಲ್‌ ಫ್ರೀ ನಂಬರ್

ನವದೆಹಲಿ, ಜನವರಿ 3: ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಕಿಚ್ಚನ್ನು ಆರಿಸುವ ನಿಟ್ಟಿನಲ್ಲಿ ಬಿಜೆಪಿ ಹೊಸ ಅಭಿಯಾನಕ್ಕೆ ಕೈ ಹಾಕಿದೆ.

ಕಾಯ್ದೆಗೆ ಬೆಂಬಲ ಸೂಚಿಸಿ ಸಾರ್ವಜನಿಕರು ಟೋಲ್ ಫ್ರೀ ನಂಬರ್‌ಗೆ ಮಿಸ್ಡ್‌ ಕಾಲ್ ನೀಡಿ ಅಥವಾ ಕರೆ ಮಾಡಿ ಬೆಂಬಲ ಸೂಚಿಸಬಹುದಾಗಿದೆ.

ಇದನ್ನು ರಾಷ್ಟ್ರ ಮಟ್ಟದ ಅಭಿಯಾನವೆಂದು ಬಿಜೆಪಿ ಪರಿಗಣಿಸಿದ್ದು, ಸಿಎಎ ಪರವಾದ ಧ್ವನಿ ಹೆಚ್ಚಿಸಲು ಬಿಜೆಪಿ ಮಾಡುತ್ತಿರುವ ರಾಜಕೀಯ ತಂತ್ರಗಾರಿಕೆ ಇದಾಗಿದೆ.

Amit shah

ಜನವರಿ 5ರಂದು ಈ ಟೋಲ್ ಫ್ರೀ ನಂಬರ್‌ನ್ನು ನೀಡಲು ನಿರ್ಧರಿಸಲಾಗಿದೆ. ಹತ್ತು ದಿನಗಳ ಕಾಲ ಈ ಟೋಲ್‌ಫ್ರೀ ನಂಬರ್ ಲಭ್ಯವಿರಲಿದ್ದು, ಸಾರ್ವಜನಿಕರು ದಿನದ 24 ಗಂಟೆಗಳಲ್ಲಿ ಕರೆ ಮಾಡಿ ಬೆಂಬಲ ಸೂಚಿಸಬಹುದಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ದೊರೆತ ಬಳಿಕ ರಾಷ್ಟ್ರದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕಾಯ್ದೆಯ ವಿರುದ್ಧ ಅಭಿಪ್ರಾಯ ಮೂಡಿಸಲು ಪ್ರತಿಪಕ್ಷಗಳು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದವು. ಇದಕ್ಕೆ ಪ್ರತಿ ತಂತ್ರ ರೂಪಿಸದಿದ್ದರೆ, ಕಾಯ್ದೆಯ ರಾಜಕೀಯ ಲಾಭ ಕೈತಪ್ಪಿ ಹೋಗಬಹುದು ಎಂಬ ಆತಂಕದಿಂದ ಬಿಜೆಪಿ ಈಗ ಅಖಾಡಕ್ಕಿಳಿದಿದೆ.

ಮನೆ ಮನೆಗೂ ಬಿಜೆಪಿ ನಾಯಕರು: ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶ ಹಾಗೂ ಸಕಾರಣಳನ್ನು ಸುಮಾರು ಮೂರು ಕೋಟಿ ಕುಟುಂಬಗಳಿಗೆ ವಿವರಿಸಲು ಬಿಜೆಪಿ ನಿರ್ಧರಿಸಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಇತರೆ ನಾಯಕರು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರುಗಳು ಸೇರಿ ಬಿಜೆಪಿಯ ಪ್ರತಿ ಹಂತದ ಮುಖಂಡರು ಬಿಜೆಪಿ ಗುರುತುಪಡಿಸಿರುವ ಮೂರು ಕೋಟಿ ಕುಟುಂಬಗಳನ್ನು ಸಂಪರ್ಕಿಸಲಿದೆ.

ಅಮಿತ್ ಶಾ ಖುದ್ದಾಗಿ ದೆಹಲಿಯಲ್ಲಿರುವ ಸಿಎಎ ಫಲಾನುಭವಿ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+