ಸಭೆ ರದ್ದಾದ ಮಾಹಿತಿ ನೀಡದ ಮಗ ರಾಘವೇಂದ್ರ ಮೇಲೆ ಯಡಿಯೂರಪ್ಪ ಸಿಟ್ಟು
ಬೆಂಗಳೂರು, ಡಿಸೆಂಬರ್ 28: ದಕ್ಷಿಣ ಭಾರತದ ಬಿಜೆಪಿ ಸಂಸದರು ಮತ್ತು ರಾಜ್ಯಾಧ್ಯಕ್ಷರ ಸಭೆ ರದ್ದಾಗಿದ್ದರೂ ಮಾಹಿತಿ ನೀಡದ ಕಾರಣಕ್ಕೆ ಸಂಸದ, ಮಗ ಬಿ.ವೈ. ರಾಘವೇಂದ್ರ ವಿರುದ್ಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಸಭೆ ದಕ್ಷಿಣ ಭಾರತದ ಬಿಜೆಪಿ ಸಂಸದರು ಮತ್ತು ರಾಜ್ಯಾಧ್ಯಕ್ಷರ ಸಭೆ ನಿಗದಿಯಾಗಿತ್ತು. ಅದರಲ್ಲಿ ಭಾಗವಹಿಸುವ ಸಲುವಾಗಿ ಯಡಿಯೂರಪ್ಪ ದೆಹಲಿಗೆ ಶುಕ್ರವಾರ ಬೆಳಿಗ್ಗೆ ತೆರಳಿದ್ದರು. ಅಲ್ಲಿಗೆ ಹೋದ ಬಳಿಕವೇ ಅವರಿಗೆ ಸಭೆ ಗುರುವಾರವೇ ರದ್ದಾಗಿದ್ದರ ಮಾಹಿತಿ ಗೊತ್ತಾಗಿದ್ದು.
ದೆಹಲಿಯಲ್ಲಿಯೇ ಇದ್ದ ರಾಘವೇಂದ್ರ ಅವರಿಗೆ ಸಭೆ ರದ್ದಾದ ವಿಚಾರ ಗುರುವಾರವೇ ತಿಳಿದಿತ್ತು. ಆದರೆ, ಅದನ್ನು ಯಡಿಯೂರಪ್ಪ ಅವರಿಗೆ ತಿಳಿಸಿರಲಿಲ್ಲ.

ಸಭೆ ರದ್ದಾಗಿದ್ದು ಗೊತ್ತಾದ ನಂತರ ಯಡಿಯೂರಪ್ಪ ಮಗನ ವಿರುದ್ಧ ಕೆಂಡಾಮಂಡಲರಾದರು. ಮೊದಲೇ ತಿಳಿಸಿದ್ದರೆ ದೆಹಲಿಗೆ ಬರುತ್ತಿರಲಿಲ್ಲ. ಏಕೆ ಮಾಹಿತಿ ನೀಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.












Click it and Unblock the Notifications