• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಜನರಿಂದ ಲೂಟಿ ಮಾಡಿದ ಹಣದಿಂದ ಕೆಂಪುಕೋಟೆ, ಕುತುಬ್ ಮಿನಾರ್ ನಿರ್ಮಾಣ'

|
   ಮುಸ್ಲಿಂ ಆಡಳಿತಗಾರರು ಲೂಟಿಕೋರರು ಎಂದ ಜಿವಿಎಲ್ | Oneindia kannada

   ನವದೆಹಲಿ, ಜನವರಿ 22: ಸಾರ್ವಜನಿಕರಿಂದ ಲೂಟಿ ಮಾಡಿದ ಸಂಪತ್ತಿನಿಂದ ಭಾರತದಲ್ಲಿನ ಕೆಂಪುಕೋಟೆ, ಚಾರ್ ಮಿನಾರ್, ಕುತುಬ್ ಮಿನಾರ್‌ನಂತಹ ಕಟ್ಟಡ ನಿರ್ಮಾಣವಾಗಿದೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಟೀಕಿಸಿದ್ದಾರೆ.

   ಮುಸ್ಲಿಂ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿಕೆಗೆ ತಿರುಗೇಟು ನೀಡಿರುವ ಜಿವಿಎಲ್ ಶತಮಾನಗಳ ಕಾಲ ಭಾರತ ಹಾಗೂ ಭಾರತೀಯರನ್ನು ಲೂಟಿ ಮಾಡಿ ಇಂತಹ ಕಟ್ಟಡ ಕಟ್ಟಲಾಗಿದೆ.

   ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ

   ಇದ್ಯಾವುದೂ ಬಾಬರ್ ಅಥವಾ ಬಾಬರ್ ವಶಂಸ್ಥರ ಹಣದಿಂದ ಕಟ್ಟಿಸಿದ್ದವಲ್ಲ. ಇದನ್ನು ಓವೈಸಿ ಹಾಗೂ ಅವರ ಅನುಯಾಯಿಗಳು ತಲೆಯಲ್ಲಿಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.

    800 ವರ್ಷಗಳ ಕಾಲ ದೇಶ ಲೂಟಿ

   800 ವರ್ಷಗಳ ಕಾಲ ದೇಶ ಲೂಟಿ

   ಮುಸ್ಲಿಂ ಆಡಳಿತಗಾರರು 800 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದ್ದಾರೆ. ಭಾರತೀಯರನ್ನು ಹಿಂಸಿಸಿದರ ಫಲವಾಗಿ ಚಾರ್ ಮಿನಾರ್, ಕುತುಬ್ ಮಿನಾರ್, ಕೆಂಪುಕೋಟೆ ನಿರ್ಮಾಣವಾಗಿದೆ. ಇದ್ಯಾವುದನ್ನೂ ಬಾಬರ್ ಹಣದಿಂದ ನಿರ್ಮಾಣ ಮಾಡಲಾಗಿಲ್ಲ. ಇವೆಲ್ಲವೂ ದೇಶದ ಜನರ ಹಣವಾಗಿದೆ. ಎಂದು ನರಸಿಂಹ ರಾವ್ ಹೇಳಿದ್ದಾರೆ.

    ಮುಸ್ಮಿಂ ಆಕ್ರಮಣಕಾರರ ರಾಯಭಾರತ್ವ ಏಕೆ?

   ಮುಸ್ಮಿಂ ಆಕ್ರಮಣಕಾರರ ರಾಯಭಾರತ್ವ ಏಕೆ?

   ಅನವಶ್ಯಕವಾಗಿ ಮುಸ್ಲಿಂ ಆಕ್ರಮಣಕಾರರ ರಾಯಭಾರಿ ಅಥವಾ ವಶಂಸ್ಥರು ಎಂದು ಓವೈಸಿ ಹೇಳಿಕೊಳ್ಳುವುದೇಕೆ? ದೇಶದ ಜನರು ಮುಸ್ಲಿಂ ಆಡಳಿತಗಾರರನ್ನು ಎಂದಿಗೂ ಲೂಟಿಕೋರರೆಂದೇ ಭಾವಿಸುತ್ತಾರೆ. ಇದರ ಹೊರತಾದ ಭಾವನೆಯನ್ನು ಭಾರತೀಯರಿಂದ ಓವೈಸಿ ನಿರೀಕ್ಷಿಸಲು ಸಾಧ್ಯವಿಲ್ಲ. ಓವೈಸಿ ಈ ಸತ್ಯವನ್ನು ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಓವೈಸಿ ಅಣ್ಣತಮ್ಮಂದಿರು ಆಡಳಿತಗಾರರಲ್ಲ

   ಓವೈಸಿ ಅಣ್ಣತಮ್ಮಂದಿರು ಆಡಳಿತಗಾರರಲ್ಲ

   ಅಸಾದುದ್ದೀನ್ ಓವೈಸಿ ಹಾಗೂ ಆತನ ಸಹೋದರ ಈ ದೇಶದ ಆಡಳಿತಗಾರರು ಎಂದು ಭ್ರಮಿಸಿಕೊಳ್ಳುವ ಅಗತ್ಯವಿಲ್ಲ. ಇವರು ಲೂಟಿಕೋರರ ವಶಂಸ್ಥರು ಎಂದು ಹೇಳಿಕೊಳ್ಳಲೂ ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿ ಹಾಗೂ ಸಂವಿಧಾನದ ಪ್ರಕಾರ ಎಲ್ಲರೂ ಜನರ ಸೇವಕರು ಎಂದು ನರಸಿಂಹರಾವ್ ಹೇಳಿದ್ದಾರೆ.

    ಅಸಾದುದ್ದೀನ್ ಓವೈಸಿ ಹೇಳಿದ್ದೇನು?

   ಅಸಾದುದ್ದೀನ್ ಓವೈಸಿ ಹೇಳಿದ್ದೇನು?

   ''ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಗ್ಗೆ ಮುಸ್ಲಿಮರು ಹೆದರುವ ಅಗತ್ಯವಿಲ್ಲ.ಮುಸ್ಲಿಮರು ಏನು ಹೊಂದಿದ್ದಾರೆ ಎಂದು ಕೆಲವರು ಕೇಳುತ್ತಿದ್ದಾರೆ. ಅಂತವರಿಗೆ ನಾನು ಇಂದು ತಕ್ಕ ಉತ್ತರ ನೀಡುತ್ತಿದ್ದೇನೆ. 800 ವರ್ಷಗಳ ಕಾಲ ನಾವು ದೇಶವನ್ನು ಆಳಿದ್ದೇವೆ. ದೇಶ ನಮಗೆ ಸೇರಿತ್ತು, ಇಂದೂ ದೇಶ ನಮ್ಮದೇ ಮುಂದೂ ನಮ್ಮದಾಗಿರಲಿದೆ. ನಮ್ಮ ಹಿರಿಯರು ಕುತುಬ್ ಮಿನಾರ್, ಕೆಂಪುಕೋಟೆಯನ್ನು ದೇಶಕ್ಕೆ ನೀಡಿದ್ದಾರೆ.ದೇಶದ ಪ್ರಧಾನಿ ಕೆಂಪುಕೋಟೆಯ ಮೇಲೆ ನಿಂತು ತ್ರಿವರ್ಣ ಧ್ವಜ ಹಾರಿಸುತ್ತಾರೆ ನೆನಪಿರಲಿ. ಮುಸ್ಲಿಮರು ಈ ದೇಶದಲ್ಲಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಏನಿದೆ'' ಎಂದು ಪ್ರಶ್ನಿಸಿದ್ದರು.

   English summary
   BJP Spokes Person GVL Narasimharao Slams Owaisi Over RedFort Legacy Remark.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X