ಬಿಜೆಪಿ ಸುನಾಮಿಗೆ ಚದುರಿತು ಕೇಜ್ರಿವಾಲ್ ಕ್ರೇಜ್ !
ಭಾರತೀಯ ಜನತಾ ಪಕ್ಷವು ಬಲು ಕಾತುರದಿಂದ ಎದುರು ನೋಡುತ್ತಿದ್ದ ಎಂಸಿಡಿ ಫಲಿತಾಂಶದಲ್ಲಿ ಜಯದ ಸಿಂಹಪಾಲನ್ನು ಬಿಜೆಪಿಯೇ ಪಡೆದಿರುವುದು ಇದೇ ಮೊದಲು.
ನವದೆಹಲಿ, ಏಪ್ರಿಲ್ 26: ಇತ್ತೀಚೆಗೆ ನಡೆದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿದ್ದು ಸತತ ಮೂರನೇ ಬಾರಿಗೆ ಅಧಿಕಾರ ಪಡೆಯುವಲ್ಲಿ ಸಫಲವಾಗಿದೆ.
ಭಾರತೀಯ ಜನತಾ ಪಕ್ಷವು ಬಲು ಕಾತುರದಿಂದ ಎದುರು ನೋಡುತ್ತಿದ್ದ ಎಂಸಿಡಿ ಫಲಿತಾಂಶದಲ್ಲಿ ಜಯದ ಸಿಂಹಪಾಲನ್ನು ಬಿಜೆಪಿಯೇ ಪಡೆದಿರುವುದು ಇದೇ ಮೊದಲು.[ಸೋಲಿನ ಕಹಿಯುಂಡು, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಜಯ್]
ದೆಹಲಿಯ ವಿಭಜಿತ ಕಾರ್ಪೊರೇಷನ್ ಮಾದರಿ. ಉತ್ತರ, ದಕ್ಷಿಣ ಹಾಗೂ ಪೂರ್ವ ವಲಯಗಳಲ್ಲಿ ಅದು ಪ್ರತ್ಯೇಕ ಕಾರ್ಪೋರೇಷನ್ ಮಂಡಲಗಳನ್ನು ಹೊಂದಿದೆ.
ಈ ಮೂರೂ ಮಹಾ ನಗರ ಪಾಲಿಕೆಗಳಿಗೆ ಏಪ್ರಿಲ್ 23ರಂದು ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮೂರರಲ್ಲೂ ಜಯ ಸಾಧಿಸಿದೆ. ದಕ್ಷಿಣ ವಲಯದ ಪಾಲಿಕೆಯಲ್ಲಿ 104 ಸ್ಥಾನ, ಪೂರ್ವ ವಲಯದ ಪಾಲಿಕೆಯಲ್ಲಿ 64 ಸ್ಥಾನ ಹಾಗೂ ಉತ್ತರ ವಲಯದ ಪಾಲಿಕೆಯಲ್ಲಿ 104 ಸ್ಥಾನಗಳು ಸೇರಿ ಒಟ್ಟಾರೆ 182 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.[ದೆಹಲಿ ಫಲಿತಾಂಶ : ನಾಯಕರ ಸೋಲು ಗೆಲುವಿನ ವಿಶ್ಲೇಷಣೆ]

ದಕ್ಷಿಣದಲ್ಲೇ ಅತಿ ಹೆಚ್ಚು
ಉತ್ತರ ವಲಯದಲ್ಲಿ ಅದು 65 (ಒಟ್ಟು ಸ್ಥಾನ 104) ಸ್ಥಾನಗಳನ್ನು ಗಳಿಸಿದ್ದರೆ, ಪೂರ್ವ ವಲಯದಲ್ಲಿ 49 (ಒಟ್ಟು ಸ್ಥಾನ 64) ಹಾಗೂ ದಕ್ಷಿಣ ವಲಯದಲ್ಲಿ 68 ಸ್ಥಾನಗಳನ್ನು (ಒಟ್ಟು ಸ್ಥಾನ 104) ಬಿಜೆಪಿ ಗೆದ್ದುಕೊಂಡಿದೆ.'[ಬಿಜೆಪಿಯ ದೆಹಲಿ ವಿಜಯ ಹುತಾತ್ಮ ಸಿಆರ್‌ಪಿಎಫ್ ಜವಾನರಿಗೆ ಅರ್ಪಣೆ]

ಇನ್ನೂ ಮುಗಿದಿಲ್ಲ ಮತ ಎಣಿಕೆ
ಉತ್ತರ ಹಾಗೂ ಪೂರ್ವ ವಲಯಗಳ ತಲಾ ಒಂದು ಸ್ಥಾನದಲ್ಲಿ ಚುನಾವಣಾ ಮತ ಎಣಿಕೆ ಪ್ರಗತಿಯಲ್ಲಿದ್ದು ಆ ಎರಡೂ ಸ್ಥಾನಗಳಲ್ಲಿ ಬಿಜೆಪಿ ಮುಂದಿದೆ. ಹಾಗಾಗಿ, ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಮುಗಿದ ನಂತರ, ಬಿಜೆಪಿಯ ಒಟ್ಟು ಗಳಿಕೆ 184 ಸ್ಥಾನಗಳಿಗೆ ಏರಲಿದೆ.[ಮೋದಿ ಅಲೆಯಲ್ಲ, ದೆಹಲಿ ಸೋಲಿಗೆ ಕಾರಣ EVM ಅಲೆ!]

ಬಿರುಗಾಳಿಗೆ ಸಿಲುಕಿದ ಅರವಿಂದ್
ಈ ಮೂರೂ ಮಹಾ ನಗರ ಪಾಲಿಕೆಗಳಲ್ಲಿ ದೆಹಲಿಯಲ್ಲಿರುವ ಆಮ್ ಆದ್ಮಿ ಪಕ್ಷವು ದ್ವಿತೀಯ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರದಲ್ಲಿ ಅದು 22 ಸ್ಥಾನಗಳನ್ನು ಗೆದ್ದಿದ್ದರೆ, ಪೂರ್ವದಲ್ಲಿ 9 ಸ್ಥಾನ ಹಾಗೂ ದಕ್ಷಿಣ ವಲಯದ ಪಾಲಿಕೆಯಲ್ಲಿ 16 ಸ್ಥಾನಗಳನ್ನು ಪಡೆದಿದೆ.

ಮೂರೂ ಪಾಲಿಕೆಗಳಲ್ಲಿ ನೀರಸ ಸಾಧನೆ
ಇನ್ನು, ಕಾಂಗ್ರೆಸ್ ಪಕ್ಷ ಈ ಮೂರೂ ಪಾಲಿಕೆಗಳಲ್ಲಿ ತೃತೀಯ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ವಲಯದಲ್ಲಿ 13, ಪೂರ್ವ ವಲಯದಲ್ಲಿ 3 ಹಾಗೂ ದಕ್ಷಿಣ ವಲಯದಲ್ಲಿ 13 ಸ್ಥಾನಗಳನ್ನು ಅದು ಪಡೆದಿದೆ.

ಬೆರಳೆಣಿಕೆಯ ಸಾಧನೆ
ಇತರೆ ಅಭ್ಯರ್ಥಿಗಳು ಬಿಜೆಪಿಯ ಸುನಾಮಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಉತ್ತರ ಪಾಲಿಕೆಯಲ್ಲಿ ಇತರರು 3 ಸ್ಥಾನ ಗಳಿಸಿದ್ದರೆ, ಪೂರ್ವ ವಲಯದ ಪಾಲಿಕೆಯಲ್ಲಿ 2 ಹಾಗೂ ದಕ್ಷಿಣ ವಲಯದ ಪಾಲಿಕೆಯಲ್ಲಿ 6 ಸ್ಥಾನಗಳನ್ನು ಇತರರು ಗಳಿಸಿದ್ದಾರೆ.












Click it and Unblock the Notifications