ಸೋಲಿನ ಪರಾಮರ್ಶೆಗೆ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಸಭೆ
Recommended Video

ಶೀಘ್ರ ಸಭೆ ಕರೆದ ಮೋದಿ..! | Oneindia Kannada
ನವದೆಹಲಿ, ಡಿಸೆಂಬರ್ 13: ಪಂಚ ರಾಜ್ಯ ಸೋಲಿನ ಬಗ್ಗೆ ದಿಗ್ಬ್ರಾಂತಗೊಂಡಿರುವ ಬಿಜೆಪಿ ಇಂದು ಪಕ್ಷದ ಸಂಸದೀಯ ಸಭೆ ಮಾಡುತ್ತಿದೆ.
ನರೇಂದ್ರ ಮೋದಿ ಸೇರಿದಂತೆ ಎಲ್ಲ ಸಚಿವರು, ಸಂಸದರು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಅಡ್ವಾಣಿ ಸಹ ಅವರು ಇಂದು ಬೆಳಿಗ್ಗೆ ಲೋಕಸಭೆಯಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಭಾಗವಹಿಸಿ ಪಂಚರಾಜ್ಯ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.

ಅಧಿವೇಶನ ಸಹ ಇರುವ ಕಾರಣ ಬಿಜೆಪಿಯು ಸರಣಿ ಸಭೆಗಳನ್ನು ನಡೆಸುವ ಸಂಭವ ಇದೆ. ನರೇಂದ್ರ ಮೋದಿ ನಾಯಕತ್ವದಲ್ಲಿ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಪಂಚ ರಾಜ್ಯ ಚುನಾವಣೆ ಸೋಲು ಮತ್ತು ಲೋಕಸಭೆ ಚುನಾವಣೆಯೇ ಪ್ರಮುಖ ವಿಷಯ ಆಗಿರಲಿದೆ.

ಸೋಲಿಗೆ ಕಾರಣಗಳನ್ನು ಹುಡುಕುವ, ಪಂಚ ರಾಜ್ಯದಲ್ಲಿ ಬಿಜೆಪಿ ತನ್ನ ವರಸೆ ಬದಲಿಸಿಕೊಳ್ಳುವ. ಲೋಕಸಭೆ ಚುನಾವಣೆಯ ಪೂರ್ವ ತಯಾರಿ. ಲೋಕಸಭೆ ಚುನಾವಣೆ ಮೇಲೆ ಪಂಚ ರಾಜ್ಯ ಫಲಿತಾಂಶ ಬೀರಬಹುದಾದ ಪರಿಣಾಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.












Click it and Unblock the Notifications