ಟಿವಿ ಚರ್ಚೆಯಲ್ಲಿ ಭಾಗವಹಿಸುವ ನಾಯಕರಿಗೆ ಹೊಸ ನಿಯಮ ತಂದ ಬಿಜೆಪಿ
ನವದೆಹಲಿ, ಜೂ. 7: ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ದೇಶ ವಿದೇಶಗಳಿಮದ ಟೀಕೆಗಳನ್ನು ಎದುರಿಸಿದ್ದಲ್ಲದೆ ಭಾರತೀಯ ವಸ್ತುಗಳ ಬಹಿಷ್ಕಾರಕ್ಕೂ ಕಾರಣವಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹಾಗೂ ದೆಹಲಿ ಬಿಜೆಪಿಯ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರ ಉಚ್ಚಾಟನೆಯಿಂದ ಬಿಜೆಪಿ ಎಚ್ಚೆತ್ತುಕೊಂಡಿದ್ದು, ಟಿವಿ ಚರ್ಚೆಯಲ್ಲಿ ಭಾಗವಹಿಸುವ ತನ್ನ ನಾಯಕರಿಗೆ ಹೊಸ ನಿಯಮಗಳನ್ನು ತಂದಿದೆ.
ಬಿಜೆಪಿ ಪಕ್ಷದ ಅಧಿಕೃತ ವಕ್ತಾರರು ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಅಲ್ಲದೆ ಈ ನಿರ್ಧಾರವನ್ನು ಪಕ್ಷದ ಮಾಧ್ಯಮ ವಿಭಾಗ ನಿಯೋಜಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಚರ್ಚೆಯ ಸಂದರ್ಭದಲ್ಲಿ ಯಾವುದೇ ಧರ್ಮ, ವ್ಯಕ್ತಿ ಅಥವಾ ಚಿಹ್ನೆಯನ್ನು ಟೀಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಚರ್ಚೆಯ ವೇಳೆ ವಕ್ತಾರರು ತನ್ನ ಎಲ್ಲೆ ಮೀರದಂತೆ ನಿಯಮದಲ್ಲಿ ಎಚ್ಚರಿಕೆ ನೀಡಲಾಗಿದೆ. ಚರ್ಚೆಯಲ್ಲಿ ಮಾತನಾಡುವಾಗ ತಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಅಲ್ಲದೆ ಸಂಯಮ ಮೀರಬಾರದು ಎಂದು ಹೇಳಲಾಗಿದೆ. ಎಲ್ಲದೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ತಮ್ಮ ಪಕ್ಷದ ಸಿದ್ಧಾಂತ ಹಾಗೂ ಆದರ್ಶಗಳನ್ನು ಮೀರದಂತೆ ಈ ಮೂಲಕ ತಿಳಿಸಲಾಗಿದೆ.

ಟಿವಿ ಚರ್ಚೆಯಲ್ಲಿ ಭಾಗವಹಿಸುವ ಮೊದಲೇ ಯಾವ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ತಿಳಿದುಕೊಂಡು ಯಾವ ಚಾನಲ್ ಅನ್ನು ಹೋಗಬೇಕು ಎಂದು ತಿಳಿದುಕೊಳ್ಳು ಸೂಚನೆ ನೀಡಲಾಗಿದೆ.

ಪಕ್ಷದ ಮಾಧ್ಯಮ ವಕ್ತಾರರು, ಚರ್ಚೆಯಲ್ಲಿ ಭಾಗವಹಿಸುವವರು ಯಾವುದೇ ಅಡ್ಡ ಭಾಷೆ ಬಳಸದೆ ತಮ್ಮ ಪಕ್ಷದ ಅಜೆಂಡಾ ಮೀರಿ ಮಾತನಾಡಬಾರದು ಎಂದು ತಿಳಿಸಲಾಗಿದೆ. ಈ ವೇಳೆ ತನ್ನ ಸರ್ಕಾರದ ಸಮಾಜ ಸೇವಾ ಕಾರ್ಯಗಳನ್ನು ಹೆಚ್ಚು ಪ್ರಚುರಪಡಿಸುವಂತೆ ಹೇಳಲಾಗಿದೆ. ಬಿಜೆಪಿ ಪಕ್ಷ ಯಾವುದೇ ಧರ್ಮ, ಪಂಥ ಅಥವಾ ಧರ್ಮವನ್ನು ಅವಮಾನ ಮಾಡುವ ಯಾವುದೇ ಸಿದ್ಧಾಂತದ ವಿರುದ್ಧ ಮಾತನಾಡುವ ಆಲೋಚನೆಯನ್ನು ಸಂಪೂರ್ಣ ಬಿಡಬೇಕು ಎಂದು ಹೇಳಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications