ಬಿಜೆಪಿ ಅಂದ್ರೆ 'ಬಲಾತ್ಕಾರ್ ಜನತಾ ಪಾರ್ಟಿ': ಕಾಂಗ್ರೆಸ್ ನಾಯಕನ ಟೀಕೆ!
ನವದೆಹಲಿ, ಏಪ್ರಿಲ್ 16: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹೆಸರನ್ನು ಬಲಾತ್ಕಾರ್ ಜನತಾ ಪಕ್ಷ ಎಂದು ಬದಲಿಸಿದರೆ ಸರಿಹೊಂದುತ್ತದೆ ಎಂದು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಟೀಕಿಸಿದ್ದಾರೆ.
ಜಮ್ಮು ಕಾಶ್ಮೀರದ ಕತುವಾ ಮತ್ತು ಉತ್ತರ ಪ್ರದೇಶದ ಉನ್ನಾವೋ ಪ್ರದೇಶದಲ್ಲಿ ಸಂಭವಿಸಿದ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, '20 ಕ್ಕೂ ಹೆಚ್ಚು ಬಿಜೆಪಿ ಮುಖಂಡರ ಹೆಸರು ಅತ್ಯಾಚಾರ ಪ್ರಕರಣದಲ್ಲಿ ಕಾಣಿಸಿಕೊಂಡಿದೆ ಎಂದು ನಾನೆಲ್ಲೋ ಓದಿದ್ದೇನೆ. ಈಗ ಜನರೇ ನಿರ್ಧರಿಸಬೇಕು ಇದು ಭಾರತೀಯ ಜನತಾ ಪಕ್ಷವೋ ಅಥವಾ ಬಲಾತ್ಕಾರ್ ಜನತಾ ಪಕ್ಷವೋ' ಎಂದು ಅವರು ಪ್ರಶ್ನಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್ ಅವರನ್ನು ಆರೋಪಿ ಎಂದು ಪರಿಗಣಿಸಿ ಬಂಧಿಸಲಾಗಿದೆ.

ಜಮ್ಮು ಕಾಶ್ಮೀರದ ಕತುವಾದಲ್ಲಿ ನಡದೆದ ಅತ್ಯಾಚಾರ ಪ್ರಕರಣದ ನಂತರ ಆರೋಪಿಗಳ ಪರವಾಗಿ ನಡೆದ rally ಯೊಂದರಲ್ಲಿ ಬಿಜೆಪಿಯ ಇಬ್ಬರು ಸಚಿವರು ಕಾಣಿಸಿಕೊಂದು ವಿವಾದ ಸೃಷ್ಟಿಸಿದ್ದರು. ನಂತರ ಅವರು ಮಂತ್ರಿಸ್ಥಾನವನ್ನೂ ಕಳೆದುಕೊಂಡಿದ್ದರು.












Click it and Unblock the Notifications