ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ದೆಹಲಿ ಚುನಾವಣೆಯಲ್ಲೂ ಮೋದಿ ಕಮಾಲ್

|
Google Oneindia Kannada News

ನವದೆಹಲಿ, ಡಿ 13: ಲೋಕಸಭೆ ಚುನಾವಣೆಯ ನಂತರ ನಡೆದ ದೇಶದ ಇತರ ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ, ದೆಹಲಿ ಅಸೆಂಬ್ಲಿ ಚುನಾವಣೆಯಲ್ಲೂ ಜಯಗೆಳಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಲೆ ದೇಶದ ರಾಜಧಾನಿ ಭಾಗದಲ್ಲೂ ಜೋರಾಗಿ ಬೀಸುತ್ತಿದ್ದು, ಬಿಜೆಪಿ ನಿರಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಎಬಿಪಿ ನ್ಯೂಸ್ - ನೀಲ್ಸನ್ ನಡೆಸಿದ ಸಮೀಕ್ಷೆಯನ್ನು ಉಲ್ಲೇಖಿಸಿ ಇಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಸಮೀಕ್ಷೆಯ ಪ್ರಕಾರ ಬಿಜೆಪಿ 45 ಸ್ಥಾನವನ್ನು, ಆಮ್ ಆದ್ಮಿ ಪಕ್ಷ 17 ಸ್ಥಾನ ಗಳಿಸುವ ಸಾಧ್ಯತೆಯಿದೆ. ಆದರೆ ಮುಖ್ಯಮಂತ್ರಿಗಳ ಪೈಕಿ ಅರವಿಂದ್ ಕೇಜ್ರಿವಾಲ್ (ಶೇ. 43) ಅವರ ಮೇಲೆ ಜನರಿಗೆ ಹೆಚ್ಚಿನ ಆದ್ಯತೆ ವ್ಯಕ್ತವಾಗಿದೆ.

BJP likely to get clear majority in Delhi Polls, A survey conducted ABP News - Nielsen Poll

ನಂತರದ ಸ್ಥಾನ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ (ಶೇ. 39) ಮತ್ತು ಮಾಜಿ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (ಶೇ. 5) ಅವರಿಗೆ. (ದೆಹಲಿ ಜಗತ್ತಿನ 4ನೇ ಅಪಾಯಕಾರಿ ನಗರ)

ಡಿಸೆಂಬರ್ 4 ರಿಂದ 8ರ ನಡುವೆ 35 ವಿಧಾನಸಭಾ ಕ್ಷೇತ್ರದ 6,409 ಜನರನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ನೀಲ್ಸನ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅತಿ ಕಳಪೆ ಪ್ರದರ್ಶನ ನೀಡಲಿದ್ದು ಕೇವಲ ಎಂಟು ಸ್ಥಾನವನ್ನು ಪಡೆಯಲಿದೆ.

ದೆಹಲಿ ಭಾಗದಲ್ಲಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ವ್ಯಕ್ತವಾಗಿದ್ದು ನಂತರದ ಸ್ಥಾನ ಅರವಿಂದ್ ಕೇಜ್ರಿವಾಲ್ ಅವರಿಗೆ.

ಒಳಚರಂಡಿ, ನಿರುದ್ಯೋಗ, ಕುಡಿಯುವ ನೀರಿನ ವಿಚಾರ ಈ ಚುನಾವಣೆಯಲ್ಲಿನ ಪ್ರಮುಖ ವಿಷಯವಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಡಿಸೆಂಬರ್ 2013ರಲ್ಲಿ ನಡೆದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 31, ಆಮ್ ಆದ್ಮಿ ಪಕ್ಷ 28 ಮತ್ತು ಕಾಂಗ್ರೆಸ್ 8 ಸ್ಥಾನವನ್ನು ಪಡೆದಿತ್ತು.

English summary
BJP likely to get clear majority in Delhi Assembly Polls, A survey conducted ABP News - Nielsen Poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X