Kannada Cinema Industry: ಕನ್ನಡ ಚಿತ್ರರಂಗದ ಕರಾಳ ಸ್ಥಿತಿ - ಪುನೀತ್ ರಾಜ್‌ಕುಮಾರ್ ಇಲ್ಲದೆ ಇಂಡಸ್ಟ್ರಿ ಅನಾಥ, ವೈರಲ್ ಪೋಸ್ಟ್
Kannada Cinema Industry: ಕನ್ನಡ ಚಿತ್ರರಂಗದ ಬಗ್ಗೆ ಟೆಕ್ಕಿ ಅಮರನಾಥ್ ಶಿವಶಂಕರ್ ಎನ್ನುವವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗಿದೆ. ಹಲವು ಕನ್ನಡಿಗರು ಈ ವೈರಲ್ ಪೋಸ್ಟ್‌ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು. ಅಪ್ಪು ಅವರ ನಿಧನದ ನಂತರ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದು ಹೇಳಿದ್ದಾರೆ. ದರ್ಶನ್ ಅವರ ಪರಿಸ್ಥಿತಿಗೆ ಹಲವರು ನೋವು ತೋಡಿಕೊಂಡಿದ್ದಾರೆ. ಏನಿದು ವೈರಲ್ ಪೋಸ್ಟ್ ಕನ್ನಡಿಗರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಕನ್ನಡ ಚಿತ್ರರಂಗದ ಕರಾಳ ಸ್ಥಿತಿ ಎನ್ನುವ ಶೀರ್ಷಿಕೆಯೊಂದಿಗೆ ಅಮರನಾಥ್ ಶಿವಶಂಕರ್ ಅವರು ಕನ್ನಡ ಚಿತ್ರರಂಗದ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೈರಲ್ ಪೋಸ್ಟ್‌ನಲ್ಲಿ

ಅಪ್ಪು ದೈಹಿಕವಾಗಿ ನಮ್ಮೊಂದಿಗಿಲ್ಲ.
ದರ್ಶನ್ ಕೇಸೊಂದರಲ್ಲಿ ಜೈಲು ಸೇರಿದ್ದಾರೆ.
ಸುದೀಪ್ ಬಿಗ್‌ಬಾಸ್ - ಕ್ರಿಕೆಟ್‌ನಲ್ಲಿ ತೊಡಗಿದ್ದಾರೆ.
ಶಿವಣ್ಣ ಸಿನಿಮಾಗಳು ಕಡಿಮೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟರು ಮಾಯವಾಗಿದ್ದರೆ.
ಯಶ್ ಮತ್ತು ರಿಷಬ್ ಪ್ಯಾನ್ ಇಂಡಿಯಾ ನಟರಾದ ಕಾರಣಕ್ಕೆ ಮೂರು - ನಾಲ್ಕು ವರ್ಷಗಳಿದೊಂದು ಸಿನಿಮಾ.
ಧನಂಜಯ, ರಾಜ್ ಶೆಟ್ಟರು ಇರುವುದರಲ್ಲಿ ಸಕ್ರಿಯರು.
ಗಣೇಶ್, ದುನಿಯಾ ವಿಜಯ್ ಹಾಗೂ ಮುರಳಿ ಎಲ್ಲರದ್ದೂ ಸಣ್ಣ ಮಾರುಕಟ್ಟೆ.
ಕನ್ನಡಿಗರನ್ನು ಕನ್ನಡ ಮನರಂಜನೆಯಲ್ಲಿ ಹಿಡಿದಿಟ್ಟುಕೊಳ್ಳುವುದಕ್ಕೆ ಡಾ ರಾಜಕುಮಾರ್, ವಿಷ್ಣುವರ್ಧನ್, ಶಿವಣ್ಣ ಹಾಗೂ ರವಿಚಂದ್ರನ್ ಮುಂತಾದ ನಟರ ಹಳೆಯ ಚಿತ್ರಗಳ ಮರುಬಿಡುಗಡೆ ಆಗಬೇಕಷ್ಟೆ. ಚಿತ್ರರಂಗದ ಭವಿಷ್ಯದ ಬಗ್ಗೆ ಅಷ್ಟೇನೂ ನಂಬಿಕೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ದೇವಿ ಎನ್ನುವವರು ಅಪ್ಪು ಸರ್ ಹೋದ್ಮೇಲೆ ಕನ್ನಡ ಚಿತ್ರರಂಗ ಅನಾಥ ಆಗಿದೆ ಎಂದಿದ್ದಾರೆ. ಹುಸೇನ್ ಬಾಷಾ ಎನ್ನುವವರು ದರ್ಶನ್ ರಿಲೀಸ್ ಆದರೆ ಸ್ವಲ್ಪ ನೆಮ್ಮದಿ ಸಿಗಬಹುದು ಯಾಕಂದ್ರೆ ಅವರು ನಮ್ಮೂರಿಗೋಸ್ಕರ ಚಿತ್ರಗಳನ್ನು ಮಾಡ್ತಾರೆ ಸ್ವಲ್ಪ ಮಟ್ಟಿಗೆ ಫಿಲ್ಮ್ ಇಂಡಸ್ಟ್ರಿ ರಿಕವರ್ ಆಗಬಹುದು ಎಂದಿದ್ದಾರೆ. ದೀಪಕ್ ರಾವ್ ಎನ್ನುವವರು ಕನ್ನಡ ಸಿನಿಮಾ ನೋಡುವ ಆಸಕ್ತಿಯೇ ಇಲ್ಲ. ನಟರೂ ಇಲ್ಲ, ಚೆನ್ನಾಗಿರೋ ಸಿನಿಮಾನೂ ಇಲ್ಲ ಎಂದಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣು ವರ್ಧನ್, ಪುಟ್ಟಣ್ಣ ಕಣಗಲ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ದಶಕಗಳ ಕಾಲ ಸ್ಯಾಂಡಲ್‌ವುಡ್ ಬೆನ್ನೆಲುಬಾಗಿದ್ದರು. ಇತರ ಭಾಷೆಗಳಿಂದ ಅವರಿಗೆ ಸಾಕಷ್ಟು ಹಣದ ಆಫರ್‌ಗಳು ಬಂದವು, ಆದರೆ ಅವರು ಹೋಗಿರಲಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಕರಾಳ ಸ್ಥಿತಿ
— Amarnath Shivashankar (@Amara_Bengaluru) April 29, 2026
ಅಪ್ಪು ದೈಹಿಕವಾಗಿ ನಮ್ಮೊಂದಿಗಿಲ್ಲ.
ದರ್ಶನ್ ಕೇಸೊಂದರಲ್ಲಿ ಜೈಲು ಸೇರಿದ್ದಾರೆ.
ಸುದೀಪ್ ಬಿಗ್‌ಬಾಸ್ ಕ್ರಿಕೆಟ್ ನಲ್ಲಿ ತೊಡಗಿದ್ದಾರೆ.
ಶಿವಣ್ಣ ಸಿನಿಮಾಗಳು ಕಡಿಮೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟರು ಮಾಯವಾಗಿದ್ದರೆ.
ಯಶ್ ಮತ್ತು ರಿಷಬ್ ಪಾನ್ ಇಂಡಿಯಾ ನಟರಾದ ಕಾರಣಕ್ಕೆ ಮೂರ್ನಾಲ್ಕು ವರ್ಷಗಳಿದೊಂದು…












Click it and Unblock the Notifications