Viral Video: ಬೆಂಗಳೂರು ಮಳೆಗೆ ಕುಣಿದು ಕುಪ್ಪಳಿಸಿದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್

ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಬೆಂಗಳೂರಿನ ಜನತೆಗೆ ವರುಣ ದೇವ ಕೊನೆಗೂ ಕೃಪೆ ತೋರಿದ್ದಾನೆ. ನಗರದ ಹಲವೆಡೆ ಸುರಿದ ತಂಪಾದ ಮಳೆ ಕೇವಲ ಸಾಮಾನ್ಯ ಜನರನ್ನಷ್ಟೇ ಅಲ್ಲ, ಗಣ್ಯರನ್ನು ಕೂಡ ಪುಳಕಿತಗೊಳಿಸಿದೆ. ಮಳೆಯ ಆಗಮನದಿಂದ ಎಷ್ಟೋ ಜನರು ಮೈಮರೆತು ಮಳೆಯಾಟ ಆಡಿದ್ದಾರೆ. ಇದೀಗ ಈ ಸಾಲಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ದಿಗ್ಗಜ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕೂಡ ಸೇರ್ಪಡೆಯಾಗಿದ್ದಾರೆ. ಅವರು ಮಳೆಯಲ್ಲಿ ಸಣ್ಣ ಮಗುವಿನಂತೆ ಖುಷಿಪಡುತ್ತಿರುವ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಮೈದಾನದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ವೇಗದ ಬೌಲಿಂಗ್ ಮೂಲಕ ಕಾಡುತಿದ್ದ ವೆಂಕಟೇಶ್ ಪ್ರಸಾದ್, ಸದಾ ಗಂಭೀರವಾಗಿಯೇ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಕೆಎಸ್‌ಸಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅವರು, ಆಡಳಿತಾತ್ಮಕ ವಿಚಾರಗಳಲ್ಲೂ ಕಟ್ಟುನಿಟ್ಟಿನ ನಿಲುವು ಹೊಂದಿರುವವರು. ಆದರೆ, ಬೆಂಗಳೂರಿನ ಈ ತಂಪಾದ ಮಳೆ ಅವರೊಳಗಿದ್ದ ಗಾಂಭೀರ್ಯತೆಯನ್ನು ಬದಿಗೊತ್ತಿ, ಅವರೊಳಗಿನ ಮುಗ್ಧ ಮಗುವನ್ನು ಹೊರತಂದಿದೆ.

Viral Video

'ಆಪತ್ಭಾಂಧವ' ಎಂಬ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, ವೆಂಕಟೇಶ್ ಪ್ರಸಾದ್ ಅವರು ತಮ್ಮ ಸ್ಥಾನಮಾನಗಳನ್ನು ಮರೆತು, ಮಳೆಯ ಹನಿಗಳನ್ನು ಕೈಯಲ್ಲಿ ಹಿಡಿಯುತ್ತಾ, ಮಳೆಯ ಅಹ್ಲಾದಕರ ವಾತಾವರಣವನ್ನು ಸವಿಯುತ್ತಿರುವುದನ್ನು ನೋಡಬಹುದು. ಅವರ ಮುಖದಲ್ಲಿ ಮೂಡಿರುವ ನಗು ಮತ್ತು ಮಳೆಯೊಂದಿಗಿನ ಅವರ ಸಂಭ್ರಮ ನೆಟ್ಟಿಗರ ಮನಗೆದ್ದಿದೆ.

ನೆಟ್ಟಿಗರು ಫಿದಾ

"ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಪ್ರಕೃತಿಯ ಸೌಂದರ್ಯದ ಮುಂದೆ ನಾವೆಲ್ಲರೂ ಮಕ್ಕಳೇ" ಎಂದು ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು, "ಬೆಂಗಳೂರಿನ ಮಳೆಗಿರುವ ತಾಕತ್ತೇ ಇಂತಹದ್ದು, ಎಂತವರನ್ನೂ ಮಗುವಾಗಿಸಿಬಿಡುತ್ತದೆ" ಎಂದು ಕೊಂಡಾಡುತ್ತಿದ್ದಾರೆ.

ದೀರ್ಘಕಾಲದ ಬಳಿಕ ಬಂದ ಈ ಮಳೆ, ಬೆಂಗಳೂರಿಗರ ಪಾಲಿಗೆ ಅಕ್ಷರಶಃ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ವೆಂಕಟೇಶ್ ಪ್ರಸಾದ್ ಅವರ ಈ ವೈರಲ್ ವಿಡಿಯೋ ಆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಸಾಮಾನ್ಯ ಜನರೂ ಕೂಡ ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+