ಎಂಸಿಡಿ ಚುನಾವಣಾ ಫಲಿತಾಂಶ: ಬಿಜೆಪಿಗೆ ದೊಡ್ಡ ಗೆಲವು
ಇಡೀ ದೇಶದ ಕುತೂಹಲ ಕೆರಳಿಸಿರುವ ದೆಹಲಿ ಮುನ್ಸಿಪಲ್ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.
ನವದೆಹಲಿ, ಏಪ್ರಿಲ್ 26: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಕಾರ್ಪೊರೇಷನ್ ನ ಒಟ್ಟು 270 ಸ್ಥಾನಗಳಲ್ಲಿ ಬಿಜೆಪಿ 179 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಗೆಲುವುದು ಪಡೆಯುವುದು ಖಾತ್ರಿಯಾಗಿದೆ.

ಇನ್ನುಳಿದಂತೆ, ಕಾಂಗ್ರೆಸ್ 35, ದೆಹಲಿ ರಾಜ್ಯ ಸರ್ಕಾರದ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಆಪ್) 42ರಲ್ಲಿ ಗೆಲ್ಲುವುದು ಬಹುತೇಕ ನಿಶ್ಚಯವಾಗಿದೆ. ಇತರ ಅಭ್ಯರ್ಥಿಗಳು 14 ಸ್ಥಾನಗಳಲ್ಲಿ ಮುಂದಿದ್ದಾರೆ.
ಹಾಗಾಗಿ, ದೆಹಲಿ ಕಾರ್ಪೊರೇಷನ್ ನ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಸತತ ಮೂರನೇ ಬಾರಿಗೆ ಹಿಡಿಯುವುದು ಖಾತ್ರಿಯಾಗಿದೆ. ಈ ಹಿಂದೆಯೂ ಎರಡು ಬಾರಿ ಇಲ್ಲಿ ಬಿಜೆಪಿ ಜಯ ಸಾಧಿಸಿದೆ.
ಎಂಸಿಡಿ ದಕ್ಷಿಣ ಭಾಗದ ಮತ ಎಣಿಕೆ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಒಟ್ಟು 104 ಸ್ಥಾನಗಳ ಮತ ಎಣಿಕೆಯಲ್ಲಿ 100 ಸ್ಥಾನಗಳ ಮತ ಎಣಿಕೆ ಪೂರ್ಣಗೊಂಡಿದೆ. ಇದರಲ್ಲಿ ಬಿಜೆಪಿ 64 ಸ್ಥಾನಗಳಲ್ಲಿ ಗೆಲವು ಪಡೆದಿದ್ದರೆ, ಆಪ್ 18ರಲ್ಲಿ ಹಾಗೂ ಕಾಂಗ್ರೆಸ್ 12ರಲ್ಲಿ ಜಯ ಸಾಧಿಸಿದೆ. 6 ಸ್ಥಾನಗಳು ಇತರರ ಪಾಲಾಗಿವೆ.












Click it and Unblock the Notifications