• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯನ್ನು 'ಹಕ್ಕಿ ಪಿಕ್ಕೆ' ಎಂದ ರಮ್ಯಾಗೆ ಮಹಾಮಂಗಳಾರತಿ!

|

ನವದೆಹಲಿ, ನವೆಂಬರ್ 02: 'ನಿಮ್ಮಂಥ ಅಪ್ರಬುದ್ಧ ವ್ಯಕ್ತಿಯಿಂದ ಬೇರೇನನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ!' ಇದು ಪ್ರಧಾನಿ ಮೋದಿ ಬಗ್ಗೆ ನಟಿ ರಮ್ಯಾ ಮಾಡಿದ ಟ್ವೀಟ್ ಗೆ ವ್ಯಕ್ತಿಯೊಬ್ಬರು ನೀಡಿದ ಖಡಕ್ ಪ್ರತಿಕ್ರಿಯೆ.

ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 182 ಮೀಟರ್ ನ ವಿಶ್ವದ ಅತೀ ಎತ್ತರದ ಪ್ರತಿಮೆಯ ಬಳಿ ನಿಂತಿದ್ದ ಮೋದಿಯವರನ್ನು ಕಂಡು, 'ಇದೇನು ಹಕ್ಕಿಯ ಪಿಕ್ಕೆಯಾ?(Is that bird dropping?)' ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಪ್ರಶ್ನಿಸಿದ್ದರು.

ಪ್ರಧಾನಿ ಮೋದಿಯನ್ನು ಹಕ್ಕಿ ಪಿಕ್ಕೆಗೆ ಹೋಲಿಸಿದರಾ ರಮ್ಯಾ?

ಅವರ ಈ ಟ್ವೀಟ್ ಗೆ ಸಾಕಷ್ಟು ಜನ ಮಹಾಮಂಗಳಾರತಿ ಮಾಡಿ, ಛೀಮಾರಿ ಹಾಕಿದ್ದಾರೆ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಸಮಯ ಸಿಕ್ಕಾಗಲೆಲ್ಲ ಅಣಕಿಸುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮತ್ತೊಮ್ಮೆ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

ಇನ್ನೇನು ನಿರೀಕ್ಷಿಸುವುದಕ್ಕೆ ಸಾಧ್ಯ?

ನಿಮ್ಮಂಥ ಅಪ್ರಬುದ್ಧ ವ್ಯಕ್ತಿಗಳಿಂದ ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ? ಎಂದು ಹಿರೆನ್ ಪಟೇಲ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇದೇ ಹಕ್ಕಿ ಪಿಕ್ಕೆಯೇ ನಿಮಗೆ 2019 ರ ಚುನಾವಣೆಯಲ್ಲಿ ಪಾಠ ಕಲಿಸುತ್ತದೆ ಎಂದು ನರೇಶ್ ಕಾವುರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಈ ಹಕ್ಕಿಪಿಕ್ಕೆಯ ಸಾಮರ್ಥ್ಯ ಗೊತ್ತೇ?

'ಕುಟುಂಬ ರಾಜಕಾರಣದ ಹಗಲು ಗನಸನ್ನು ಇದೇ ಹಕ್ಕಿಪಿಕ್ಕೆಯೇ ಅಲ್ಲಾಡಿಸಿದೆ ಎಂದರೆ ಅದರ ಸಾಮರ್ಥ್ಯವೇನು ಎಂಬುದನ್ನು ಊಹಿಸಿಕೊಳ್ಳಿ! ನಿಮ್ಮನ್ನು ನಾಶಗೊಳಿಸುವುದಕ್ಕೆ ಒಂದು ಹಕ್ಕಿಪಿಕ್ಕೆ ಸಾಕಾಯ್ತಲ್ಲ!' ಎಂದು ಅಣಕಿಸಿದ್ದಾರೆ ಜಾವೇದ್ ಇಕ್ಬಾಲ್ ಶಾ

ಮಂಡ್ಯ ಉಪ ಚುನಾವಣೆ : ಕಾಂಗ್ರೆಸ್‌ಗೆ ಬಿಸಿತುಪ್ಪವಾದ ರಮ್ಯಾ ಅಭಿಮಾನಿಗಳು!

ಹಕ್ಕಿಪಿಕ್ಕೆಯಾಗುವುದೇ ಉತ್ತಮ!

ನೆಹರೂ ಕುಟುಂಬದ ಬೂಟು ನೆಕ್ಕುವುದಕ್ಕಿಂತ ಸರ್ದಾರ್ ಪಟೇಲರ ಕಾಲಿನ ಬಳಿ ಹಕ್ಕಿಪಿಕ್ಕೆಯಾಗುವುದೇ ನಮಗೆ ಉತ್ತಮ ಎನ್ನಿಸುತ್ತದೆ ಎಂದಿದ್ದಾರೆ ಗಿರೀಶ್ ಭಾರದ್ವಜ.

ಗಾಂಚಾಲಿಗೆ ಕಡಿಮೆ ಇಲ್ಲ!

ಒಂದು ಕುಟುಂಬದ ಗುಲಾಮರಾದರೆ ಹೀಗೆಯೇ ಆಗುತ್ತದೆ. ನೀವು ಹೇಳಿದ ಹಕ್ಕಿ ಪಿಕ್ಕೆಯೇ ಈ ದೇಶಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದೆ, ನಿಮ್ಮ ಚಾಚಾ ಅಲ್ಲ! ನಾಲ್ಕು ಅಕ್ಷರ ಸ್ಕ್ರಿಫ್ಟ್ ಇಲ್ಲದೆ ಮಾತಾಡುವುದಕ್ಕೂ ಬರೆದಿದ್ದರೂ ಗಾಂಚಾಲಿಗೆ ಕಡಿಮೆ ಇಲ್ಲ' ಎಂದಿದ್ದಾರೆ ಪ್ರಶಾಂತ್ ಪದ್ಮನಾಭ.

'ಚೋರ್ ಪಿಎಂ' ಎಂದು ಟೀಕಿಸಿದ ಗೌರಮ್ಮನ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸ್

ಹಕ್ಕಿಪಿಕ್ಕೆಯನ್ನು ತಬ್ಬಿಕೊಂಡಿದ್ದ ರಾಹುಲ್!

ದಿವ್ಯ ಸ್ಪಂದನ... ನಿಮ್ಮ ರಾಜ ಇದೇ ಹಕ್ಕಿಪಿಕ್ಕೆಯನ್ನೇ ಒಂದು ದಿನ ತಬ್ಬಿಕೊಂಡಿದ್ದರು! ಎಂದು ಲೇವಡಿ ಮಾಡಿ ಮೀಟೂ ಬ್ಯಾಡ್ ಹಿಂದು ಎಂಬ ಖಾತೆಯಿಡ ಪೋಸ್ಟ್ ಮಾಡಲಾಗಿದೆ.

English summary
Congress social media cell head Divya Spandana has been facing a huge backlash on social media and condemnation, not just from the BJP but also from her own party for her tweet targeting Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X