ಅವಿಶ್ವಾಸ ನಿರ್ಣಯ: ಸಂಸತ್‌ನಿಂದ ಹೊರ ನಡೆದ ಬಿಜೆಡಿಯ 20 ಸಂಸದರು
ನವದೆಹಲಿ, ಜುಲೈ 20: ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕುರಿತು ಚರ್ಚೆ ಆರಂಭವಾಗುವುದಕ್ಕೂ ಮೊದಲೇ ಒರಿಸ್ಸಾದ ಬಿಜು ಜನತಾದಳ ಪಕ್ಷದ 20 ಸದಸ್ಯರು ಸಂಸತ್‌ನಿಂದ ಹೊರನಡೆದಿದ್ದಾರೆ.
ಒರಿಸ್ಸಾದ ಪ್ರಾದೇಶಿಕ ಪಕ್ಷವಾಗಿರುವ ಬಿಜು ಜನತಾದಳ ತಮ್ಮ ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯವಾಗಿದೆ ಎಂದು ಹೇಳಿ ಅವಿಶ್ವಾಸ ನಿರ್ಣಯದಿಂದ ಹೊರಗುಳಿಯಲು ನಿರ್ಧಿಸಿತು.
Biju Janata Dal (BJD) walks out of the Lok Sabha ahead of #NoConfidenceMotion pic.twitter.com/0fKHuRZGju
— ANI (@ANI) July 20, 2018
ಈ ಚರ್ಚೆ ಮತ್ತು ಮತದಾನ ಯಾವುದೇ ರಾಜ್ಯಕ್ಕೆ ಫಲಪ್ರಧವಲ್ಲ ಎಂದು ಹೇಳಿದ ಬಿಜು ಜನತಾದಳದ ಮುಖಂಡರು ತಾವು ಕಲಾಪದ ಎಲ್ಲ ಕಾರ್ಯಗಳನ್ನು ಬಹಿಷ್ಕಾರ ಮಾಡುವುದಾಗಿ ಹೇಳಿದರು.

ಯುಪಿಎಯ 10 ವರ್ಷ ಹಾಗೂ ಬಿಜೆಪಿಯ 4 ವರ್ಷ ಆಡಳಿತವನ್ನು ನಾವು ನೋಡಿದ್ದೇವೆ ನಮಗೆ ಎರಡೂ ಪಕ್ಷಗಳ ಮೇಲೆ ವಿಶ್ವಾಸವಿಲ್ಲ, ಈಗಿರುವ ಸರ್ಕಾರವೂ ಒರಿಸ್ಸಾವನ್ನು ನಿರ್ಲಕ್ಷಿಸಿದೆ ಎಂದು ಹೇಳಿ ಅವರು ಸದನದಿಂದ ಹೊರನಡೆದರು.












Click it and Unblock the Notifications