• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಪಿಲ್ ಸಿಬಲ್ ಮೇಲೆ ಬರ್ಖಾ ದತ್ ನೇರ ದಾಳಿ, ಕಾನೂನು ಸಮರಕ್ಕೂ ಸೈ!

|

ನವದೆಹಲಿ, ಜುಲೈ 15: ಕಾಂಗ್ರೆಸ್ ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ತಮ್ಮ ಪತ್ನಿಯನ್ನು ಪತ್ರಕರ್ತೆ ಬರ್ಖಾ ದತ್ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಎಚ್ ಟಿಎಸ್ ತಿರಂಗಾ ಚಾನೆಲ್ ನಲ್ಲಿ ಉದ್ಯೋಗಿಗಳಿಗೆ ನಿಷ್ಕಾರಣವಾಗಿ ಕೆಲವರನ್ನು ಕೆಲಸದಿಂದ ತೆಗೆಯುತ್ತಿರುವ ಕ್ರಮವನ್ನು ವಿರೋಧಿಸಿರುವ ದತ್, ಸಾಲು ಸಾಲು ಟ್ವೀಟ್ ಗಳ ಮೂಲಕ ಕಪಿಲ್ ಸಿಬಲ್ ಅವರನ್ನು ದೂರಿದ್ದಾರೆ. ಕೆಲಸದಿಂದ ತೆಗೆದುಹಾಕಲಾದ ಪತ್ರಕರ್ತರಿಗೆ ಕನಿಷ್ಟ ಆರು ತಿಂಗಳ ವೇತನವನ್ನಾದರೂ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿ ಸಂಭಾವಿತ ಎಂದು ತೋರಿಸಿಕೊಳ್ಳುವ ವ್ಯಕ್ತಿಯೊಬ್ಬರು ಪತ್ರಕರ್ತರನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ ಎಂದು ದತ್ ಪ್ರಶ್ನಿಸಿದ್ದಾರೆ.

ಪೊಲೀಸರನ್ನು ಮಾಧ್ಯಮಗಳಿಂದ ದೂರ ಮಾಡಿದ ಹೊಸ ಆದೇಶ

ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಜೊತೆಯಾಗಿ ಆರಂಭಿಸಿದ್ದ ಎಚ್ ಟಿಎನ್ ತಿರಂಗಾ ಟಿವಿಯಲ್ಲಿ ಇತ್ತೀಚೆಗೆ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಯಾವುದೇ ಸೂಚನೆ ಇಲ್ಲದೆ ಕೆಲಸದಿಂದ ತೆಗೆದು ಹಾಕಲಾಗಿದೆ. ಸಾರ್ವಜನಿಕ ಬದುಕಿನಲ್ಲಿ ಸಂಭಾವಿತರಂತೆ ತೋರಿಸಿಕೊಳ್ಳುವ ಸಿಬಲ್ ಪತ್ರಕರ್ತರನ್ನು ಇಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನೇರವಾಗಿಯೇ ಬರ್ಖಾ ದತ್ ದಾಳಿ ನಡೆಸಿದ್ದಾರೆ.

ಸಿಬಲ್ ಅವರನ್ನೇ ನಂಬಿದ್ದರು!

ಸಿಬಲ್ ಅವರನ್ನೇ ನಂಬಿದ್ದರು!

ಇಲ್ಲಿ ಕೆಲಸ ಮಾಡುತ್ತಿದ್ದ ಎಷ್ಟೋ ಜನರು ಬೇರೆ ಮಾಧ್ಯಮ ಸಂಸ್ಥೆಗಳಿಂದ ಬಂದ ಆಫರ್ ಗಳನ್ನೂ ಒಪ್ಪಿಕೊಳ್ಳದೆ ಸಿಬಲ್ ಅವರನ್ನೇ ನಂಬಿದ್ದರು, ಅವರು ಉದ್ಯೋಗ ಭದ್ರತೆ ನೀಡುತ್ತಾರೆ ಎಂಬ ವಿಶ್ವಾಸ ಇರಿಸಿಕೊಂಡಿದ್ದರು. ಆದರೆ ನಲವತ್ತೆಂಟು ಗಂಟೆಗಳ ಲೈವ್ ಪ್ರೋಗ್ರಾಮ್ ಕ್ಯಾನ್ಸಲ್ ಮಾಡುವಂಥ ಪರಿಸ್ಥಿತಿ ಉಂಟಾಗಿದೆ. ಇಷ್ಟಾದರೂ ಸಿಬಲ್ ಆಗಲೀ, ಅವರ ಪತ್ನಿಯಾಗಲೀ ಉದ್ಯೋಗಿಗಳ ಬಳಿ ಮಾತನಾಡುವ ಸೌಜನ್ಯ ತೋರಲಿಲ್ಲ- ಬರ್ಖಾ ದತ್

ಪತ್ರಕರ್ತರನ್ನು ನೋಡುವ ರೀತಿ ಸರಿಯಿಲ್ಲ!

ಪತ್ರಕರ್ತರನ್ನು ನೋಡುವ ರೀತಿ ಸರಿಯಿಲ್ಲ!

ಮಾಂಸ ರಫ್ತು ಕಾರ್ಖಾನೆಯನ್ನು ನಡೆಸುತ್ತಿದ್ದ ಕಪಿಲ್ ಸಿಬಲ್ ಪತ್ನಿ, "ನಾನು ಕಾರ್ಖಾನೆಯನ್ನು ಮುಚ್ಚುವಾಗ ಒಬ್ಬ ಕಾರ್ಮಿಕನಿಗೆ ಒಂದು ಪೈಸೆಯನ್ನೂ ನೀಡದೆ ಮುಚ್ಚಿದ್ದೇನೆ, ಇನ್ನು ಆರು ತಿಂಗಳ ಸಂಬಳ ಕೇಳುವುದಕ್ಕೆ ಈ ಪತ್ರಕರ್ತರು ಯಾರು ಎಂದು ಪ್ರಶ್ನಿಸುತ್ತಾರೆ. ಅವರ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಬಹುದೇನೋ, ಆದರೆ ಪತ್ರಕರ್ತರನ್ನು ಆಕೆ ಅವಮಾನಕರವಾಗಿ ಕಾಣುತ್ತಿರುವುದು ಸರಿಯಲ್ಲ"- ಬರ್ಖಾ ದತ್

ಆಪಲ್ ಕಂಪೆನಿಗೂ ಆಪಲ್ ಹಣ್ಣಿಗೂ ಗೊಂದಲಕ್ಕೆ ಈಡಾದ ಪಾಕ್ ಸುದ್ದಿ ನಿರೂಪಕಿ

ದಿನಕ್ಕೆ ಕೋಟಿ ರೂ. ದುಡಿವ ಸಿಬಲ್!

ದಿನಕ್ಕೆ ಕೋಟಿ ರೂ. ದುಡಿವ ಸಿಬಲ್!

ಅತ್ಯಂತ ನಾಚಿಕೆಗೇಡಿನ ವಿಷಯ ಎಂದರೆ, ದಿನಕ್ಕೆ ಕೋಟಿಗಟ್ಟಲೆ ಹಣ ದುಡಿಯ ಕಪಿಲ್ ಸಿಬಲ್ ಗೆ 200 ಉದ್ಯೋಗಿಗಳಿಗೆ ಆರು ತಿಂಗಳ ವೇತನ ಹೋಗಲಿ, ಮೂರು ತಿಂಗಳ ವೇತನ ನೀಡುವುದಕ್ಕೂ ಹಣವಿಲ್ಲ ಎಂದರೆ ಏನರ್ಥ? ಅವರು ಇನ್ನೂರು ಉದ್ಯೋಗಿಗಳ ಬಾಳನ್ನೇ ಹಾಳುಮಾಡುತ್ತಿದ್ದಾರೆ- ಬರ್ಖಾ ದತ್

ಮೋದಿ ಮೇಲೆ ಆರೋಪ

ಮೋದಿ ಮೇಲೆ ಆರೋಪ

ಕಪಿಲ್ ಸಿಬಲ್ ಮತ್ತು ಪತ್ನಿ ಇಬ್ಬರೂ ಮೋದಿ ಸರ್ಕಾರ ಈ ಚಾನೆಲ್ ನಡೆಯಲು ಬಿಡುತ್ತಿಲ್ಲ ಎನ್ನುತ್ತಿದ್ದಾರೆ ಎಂದು ನನಗೆ ಕೆಲವರು ಹೇಳಿದರು. ಅಂದರೆ ಮೋದಿ ಮೇಲೆ ಆರೋಪ ಹೊರಿಸಲು ವರು ಮುಂದಾಗಿದ್ದಾರೆ. ಆದರೆ ನನಗೆ ಗೊತ್ತು, ಇದರಲ್ಲಿ ಸರ್ಕಾರದ ಕೈವಾಡವಿಲ್ಲ. ಪತಿ ಮತ್ತು ಪತ್ನಿ ಇಬ್ಬರಿಗೂ ಉದ್ಯೋಗಿಗಳನ್ನು ಎದುರಿಸುವ ಧೈರ್ಯವಿಲ್ಲ. ಅವರೊಂದಿಗೆ ಮಾತುಕತೆಯನ್ನೂ ನಡೆಸಿಲ್ಲ. ಅವರು ರಜೆಗೆಂದು ಲಂಡನ್ನಿಗೆ ತೆರಳಿದ್ದಾರೆ. ನನಗೆ ಮಲ್ಯಾ ನೆನಪಾಗುತ್ತಿದ್ದಾರೆ - ಬರ್ಖಾ ದತ್

ನನ್ನ ಮೇಲೆ ಮಾನನಷ್ಟ ಮೊಕದ್ದಮೆ

ನನ್ನ ಮೇಲೆ ಮಾನನಷ್ಟ ಮೊಕದ್ದಮೆ

"ನಾನು ಉದ್ಯೋಗಿಗಳ ಹಕ್ಕಿಗಾಗಿ ಹೋರಾಡುತ್ತಿರುವುದಕ್ಕಾಗಿ ನನಗೆ ಬೆದರಿಕೆ ಹಾಕಲಾಗುತ್ತಿದೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾಗಿದ್ದಾರೆ. "ನಾನು ಕಪಿಲ್ ಸಿಬಲ್ ಅವರನ್ನು ಮಲ್ಯಗೆ ಹೊಲೀಸಿದ ಇಮೇಲ್ ಅನ್ನು ಹಿಂಪಡೆಯುವಂತೆ ಹೇಳುತ್ತಿದ್ದಾರೆ. ಆದರೆ ನಾನು ಅದಕ್ಕೆ ಒಪ್ಪಿಲ್ಲ. ನಾನು ಈ ಸಂದರ್ಭದಲ್ಲಿ ಎಚ್ ಟಿಎನ್ ನ್ಯೂಸ್ ಉದ್ಯೋಗಿಗಳೊಂದಿಗಿದ್ದೇನೆ. ಮತ್ತು ಈ ವಿಷಯದಲ್ಲಿ ಕಾನೂನಾತ್ಮಕವಾಗಿ ಅವರೊಂದಿಗೆ ಹೋರಾಡಲು ನಾನು ಮುಂದಾಗುತ್ತೇನೆ, ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ" - ಬರ್ಖಾ ದತ್

ಅವಾಚ್ಯ ಭಾಷೆಗಳಿಂದ ನಿಂದನೆ

ಅವಾಚ್ಯ ಭಾಷೆಗಳಿಂದ ನಿಂದನೆ

ಎಲ್ಲದಕ್ಕಿಂತ ಕೀಳು ಎಂದರೆ ಮಹಿಳಾ ಉದ್ಯೋಗಿಗಳನ್ನು ಕಪಿಲ್ ಸಿಬಲ್ ಮತ್ತವರ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು. ಈ ಬಗ್ಗೆ ಮಹಿಳಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ನನಗೆ ಮೌನವಾಗಿದ್ದುಬಿಡುವುದು ಸುಲಭ. ಕಪಿಲ್ ಸಿಬಲ್ ನಮ್ಮಂಥ ಹಲವು ಹಿರಿಯ ಪತ್ರಕರ್ತರಿಗೂ ವೇತನ ನೀಡಿಲ್ಲ. ನಾವು ಆ ಬಗ್ಗೆ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಆದರೆ ಈ ಇನ್ನೂರು ಉದ್ಯೋಗಿಗಳ ಕತೆ ಏನು? ಅವರ ಮೇಲೆ ಅವಲಂಬಿತರಾದವರ ಕತೆ ಏನು? ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆಂದು ಭಾವಿಸುತ್ತೇನೆ" -ಬರ್ಖಾ ದತ್

English summary
Journalist Barkha dutt attacked Senior Congress leader and well-known lawyer Kapil Sibal and his wife for allegedly reneging on their promise of job security to staff members of HTN Tiranga TV Channel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X