ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಧ್ವಂಸ ಪ್ರಕರಣ: ಪದ್ಮವಿಭೂಷಣ ಅಡ್ವಾಣಿಗೆ ನೋಟಿಸ್

By Mahesh
|
Google Oneindia Kannada News

ನವದೆಹಲಿ, ,ಆ.31: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಪದ್ಮ ವಿಭೂಷಣ ಎಲ್ ಕೆ ಅಡ್ವಾಣಿ ಜೊತೆಗೆ ಇತರೆ ಆರೋಪಿಗಳಾದ ಕರ ಸೇವಕರಿಗೆ ಸುಪ್ರೀಂಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಪಡೆಯಲಿರುವ 20 ಮಂದಿ, ಇದಕ್ಕೆ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ.

ಬಾಬ್ರಿ ಮಸೀದಿ ಪ್ರಕರಣದಲ್ಲಿ ನೇರ ಆರೋಪಿಗಳಾಗಿಲ್ಲ ಎಂದು ಹಲವರನ್ನು ಕೈ ಬಿಡಲ್ಲ ಸಾಧ್ಯವಿಲ್ಲ. ಮಸೀದಿ ಸಂಚು, ಪ್ರಚೋದನಕಾರಿ ಭಾಷಣ ಮಾಡಿದ ಎಲ್ಲರೂ ಪ್ರಕರಣದ ಆರೋಪಿಗಳಾಗಿ ಪರಿಗಣಿಸಬೇಕು ಎಂದು ಸಿಬಿಐ ತನ್ನ ಅಫಿಡವಿಟ್ ನಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಬಾಬ್ರಿ ಮಸೀದಿ ಧ್ವಂಸ: ಟೈಮ್ ಲೈನ್]

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅನೇಕರ ಕೈವಾಡವಿದೆ ಎಂಬ ಶಂಕೆ ವ್ಯಕ್ತಪಡಿಸಿ ಹಾಜಿ ಮೆಹಮೂದ್ ಎಂಬುವರು ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿದ್ದರು.

Babri Masjid conspiracy case: SC issues notice to BJP leader Advani, 19 others

ಅಡ್ವಾಣಿ ಸೇರಿ 20 ಮಂದಿ ವಿರುದ್ಧದ ಸಂಚಿನ ಆರೋಪವನ್ನು ಅಲಹಾಬಾದ್ ಹೈಕೋರ್ಟ್ ಕೈಬಿಟ್ಟ ಕ್ರಮವನ್ನು ಹಾಜಿ ಮೆಹಮೂದ್ ಪ್ರಶ್ನಿಸಿದ್ದರು. ಮೇ.20, 2010ರಂದು ಅಡ್ವಾಣಿ ಸೇರಿದಂತೆ ಹಿರಿಯ ನಾಯಕರನ್ನು ಆರೋಪ ಮುಕ್ತಗೊಳಿಸಲಾಗಿತ್ತು. [ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?]

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಕೂಡಾ ಮೇಲ್ಮನವಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅಡ್ವಾಣಿ ಸೇರಿದಂತೆ 19 ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಈ ಬಗ್ಗೆ ಪ್ರಶ್ನಿಸಲು ವಿಳಂಬ ಮಾಡಿದ್ದೇಕೆ? ವಿವರಣೆ ನೀಡಿ ಎಂದು ಸಿಬಿಐಗೂ ನೋಟಿಸ್ ನೀಡಲಾಗಿದೆ. [ಅಡ್ವಾಣಿಗೆ ಪದ್ಮ ವಿಭೂಷಣ ಪ್ರದಾನ]

ಸಿಬಿಐ ಎಫ್ ಐಆರ್ : FIR ಸಂಖ್ಯೆ 198/92 ನಲ್ಲಿ ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ್ ಜೋಶಿ, ಸಾಧ್ವಿ ರಿತಾಂಬರ, ಗಿರಿರಾಜ್ ಕಿಶೋರ್, ಅಶೋಕ್ ಸಿಂಘಾಲ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ ಅವರ ಹೆಸರು ಸೇರಿಸಲಾಗಿದೆ. ಎಲ್ಲರ ಮೇಲೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊರೆಸಲಾಗಿದೆ. ['ಮಸೀದಿ ಧ್ವಂಸ, ಪೂರ್ವ ಯೋಜಿತ ಕೃತ್ಯವಲ್ಲ']

FIR ಸಂಖ್ಯೆ 197/92 ನಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಕರ ಸೇವಕರ ಹೆಸರುಗಳು ನಮೂದಾಗಿದೆ. 197/92 ಹಾಗೂ 198/92 ಎಫ್ ಐಆರ್ ಒಂದೇ ಪ್ರಕರಣಕ್ಕೆ ಸೇರಿದೆ. ಬಾಬ್ರಿ ಮಸೀದಿ ಸಂಚಿನ ಹಿಂದಿರುವ ಶಕ್ತಿಗಳಿಗೆ ಶಿಕ್ಷೆಯಾಗಬೇಕಿದೆ ಎಂದು ಸಿಬಿಐ ಹೇಳಿದೆ.

English summary
Supreme Court on Tuesday(Mar.31) issued notice to BJP leader LK Advani and 19 others in Babri masjid demolition case. The judgment has come on a petition filed by Haji Mehmood, alleging conspiracy in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X