ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಸಾಧಕರಿಗೆ ಸಂದ ಪದ್ಮ ಗೌರವ

|
Google Oneindia Kannada News

ನವದೆಹಲಿ ,ಮಾ. 30: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ 104 ಗಣ್ಯರನ್ನು ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು. ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಳವೀಯ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಯಿತು.

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾನಿ ಮತ್ತು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು. [ಧರ್ಮಸ್ಥಳ: ವೀರೇಂದ್ರ ಹೆಗ್ಗಡೆಗೆ ಪದ್ಮ ವಿಭೂಷಣ, ಹಬ್ಬದ ಸಂಭ್ರಮ]

ಧರ್ಮ­ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (ಪದ್ಮ ವಿಭೂಷಣ), ಸಿದ್ಧ­ಗಂಗಾ­­ಮಠದ ಶಿವಕುಮಾರ ಸ್ವಾಮೀಜಿ ಮತ್ತು ವಿಜ್ಞಾನಿ ಡಾ. ಖರಗ್‌ ಸಿಂಗ್‌ ವಾಲ್ಡಿಯಾ (ಪದ್ಮ ಭೂಷಣ), ವಿಜ್ಞಾನಿ ಎಸ್‌. ಅರು­ಣನ್‌, ಇನ್ಫೊಸಿಸ್‌ ಸಂಸ್ಥಾಪಕ­ರಲ್ಲಿ ಒಬ್ಬರಾದ ಟಿ.ವಿ. ಮೋಹನ್‌ದಾಸ್‌ ಪೈ (ಪದ್ಮಶ್ರೀ) ಅವ­ರಿಗೆ ಪ್ರಶಸ್ತಿ ಗೌರವ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. (ಪಿಟಿಐ ಚಿತ್ರಗಳು)

ಪಿವಿ ಸಿಂಧು ಅವರಿಗೆ ಪದ್ಮಶ್ರೀ ಪ್ರಶಸ್ತಿ

ಪಿವಿ ಸಿಂಧು ಅವರಿಗೆ ಪದ್ಮಶ್ರೀ ಪ್ರಶಸ್ತಿ

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.

ಸರ್ದಾರ್ ಸಿಂಗ್ ಗೆ ಪದ್ಮಶ್ರೀ

ಸರ್ದಾರ್ ಸಿಂಗ್ ಗೆ ಪದ್ಮಶ್ರೀ

ಭಾರತದ ಖ್ಯಾತ ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರಿಗೆ ಸಂದ ಪದ್ಮಶ್ರೀ ಗೌರವ.

 ಲಾಲಕೃಷ್ಣ ಅಡ್ವಾನಿಗೆ ಪದ್ಮ ವಿಭೂಷಣ

ಲಾಲಕೃಷ್ಣ ಅಡ್ವಾನಿಗೆ ಪದ್ಮ ವಿಭೂಷಣ

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾನಿಗೆ ಪದ್ಮವಿಭೂಷಣ ಗೌರವ ನೀಡುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಪದ್ಮ ಪುರಸ್ಕೃತರು

ಪದ್ಮ ಪುರಸ್ಕೃತರು

ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಗೌರವ ಸ್ವೀಕಾರ ಸಮಾರಂಭದ ನೋಟ.

ಭಾರತ ರತ್ನ ಮಾಳವೀಯ

ಭಾರತ ರತ್ನ ಮಾಳವೀಯ

ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮದಮ್ ಮೋಹನ್ ಮಾಳವೀಯ ಅವರ ಕುಟುಂಬದವರು ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು.

ಸುಧಾ ರಘುನಾಥನ್ ಗೆ ಪದ್ಮವಿಭೂಷಣ

ಸುಧಾ ರಘುನಾಥನ್ ಗೆ ಪದ್ಮವಿಭೂಷಣ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸುಧಾ ರಘುನಾಥನ್ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದರು.

ಪ್ರಕಾಶ್ ಸಿಂಗ್ ಬಾದಲ್

ಪ್ರಕಾಶ್ ಸಿಂಗ್ ಬಾದಲ್

ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಪದ್ಮ ವಿಭೂಷಣ ಗೌರವ.

ಅಡ್ವಾನಿ ನಮನ

ಅಡ್ವಾನಿ ನಮನ

ಪದ್ಮ ವಿಭೂಷಣ ಗೌರವ ಸ್ವೀಕರಿಸುವುದಕ್ಕೂ ಮುನ್ನ ಸಭೆಗೆ ನಮಿಸಿದ ಬಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾನಿ

English summary
Noted educationist and freedom fighter Madan Mohan Malviya was on Monday posthumously conferred the Bharat Ratna, country's highest civilian award, by President Pranab Mukherjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X