• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ: ಬೆಂಬಲಿಸಿದ ಕೇಜ್ರಿವಾಲ್

|
   ಮೋದಿ ಬಗ್ಗೆ ಕೇಜ್ರಿವಾಲ್ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್..? | arvind kejriwal

   ನವದೆಹಲಿ, ಸೆಪ್ಟೆಂಬರ್ 13: ಸಂವಿಧಾನದ 370 ನೇ ವಿಧಿಯನ್ನು ಸರ್ಕಾರ ರದ್ದುಗೊಳಿಸಿದ್ದನ್ನು ಸ್ವಾಗತಿಸುವ ಮೂಲಕ ವಿಪಕ್ಷಗಳಲ್ಲಿ ಅಚ್ಚರಿ ಮೂಡಿಸಿದ್ದ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ಪರ ನಿಂತಿದ್ದಾರೆ.

   ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾರಿಗೆ ತಂದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಿರುವ ಕೇಜ್ರಿವಾಲ್, "ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ದೆಹಲಿಯ ಟ್ರಾಫಿಕ್ ವ್ಯವಸ್ಥೆಯಲ್ಲಿ ಬಹಳ ಸುಧಾರಣೆ ಕಂಡುಬಂದಿದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

   ಆರ್ಥಿಕ ಕುಸಿತ: ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದ ಕೇಜ್ರಿವಾಲ್

   "ಮೋಟಾರ್ ವೆಹಿಕಲ್ ಕಾಯ್ದೆಯಿಂದಾಗಿ ಜನರು ಹೊರೆ ಅನುಭವಿಸುತ್ತಿದ್ದರೆ ದಂಡದ ಮೊತ್ತವನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಬಹುದು" ಎಂದು ಕೇಜ್ರಿವಾಲ್ ಹೇಳಿದ್ದಾರೆ.

   ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯಗಳೇ ಈ ಕಾಯ್ದೆಯನ್ವಯ ವಿಧಿಸುವ ದುಬಾರಿ ದಂಡವನ್ನು ವಿರೋಧಿಸಿವೆ. ಗುಜರಾತ್, ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ದಂಡದ ಮೊತ್ತವನ್ನು ಕಡಿಮೆ ಮಾಡಲು ಸಿದ್ಧ ಎಂದಿವೆ.

   'ಮೋದಿಗೆ ಜೈ' ಅಂದ್ರಾ? ಅರೆರೆ.. ಏನಾಯ್ತು ಕೇಜ್ರಿವಾಲ್ ಗೆ?

   ಅಕಸ್ಮಾತ್ ದಂಡದ ಮೊತ್ತ ಅತಿ ಎನ್ನಿಸಿದರೆ ಅದನ್ನು ಆಯಾ ರಾಜ್ಯಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

   English summary
   Delhi Chief minister Arvind Kejriwal welcomes Motor Vehicle Amendment act by Central Government,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X