ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸಮ-ಬೆಸ ಸಂಚಾರ ನಿಯಮದ ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 24 : ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ಸಮ ಮತ್ತು ಬೆಸ ಸಂಖ್ಯೆಗಳ ಕಾರುಗಳ ಸಂಚಾರ ನಿಯಮವನ್ನು ಘೋಷಿಸಿದೆ. ಜನವರಿ 1ರಿಂದ ನಿಯಮ ಜಾರಿಗೆ ಬರಲಿದ್ದು, ಭಾನುವಾರ ಹೊರತುಪಡಿಸಿ ಉಳಿದ ಆರು ದಿನಗಳು ಈ ನಿಯಮ ಜಾರಿಯಲ್ಲಿರುತ್ತದೆ.

ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸಂಚಾರದ ನಿಯಮಗಳನ್ನು ಪ್ರಕಟಿಸಿದರು. 'ಜನವರಿ 1 ರಿಂದ 15ರ ತನಕ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಜನವರಿ 15ರ ನಂತರ ನಿಯಮಗಳ ಬಗ್ಗೆ ಮೌಲ್ಯ ಮಾಪನ ನಡೆಸಿ, ಮುಂದುವರೆಸುವ ಕುರಿತು ತೀರ್ಮಾನಿಸಲಾಗುತ್ತದೆ' ಎಂದರು. [ದಿಲ್ಲಿಯಲ್ಲಿ ಐಷಾರಾಮಿ ಕಾರು ಕೊಳ್ಳಲು ಸಾಧ್ಯವೇ ಇಲ್ಲ]

ಸಮ ಮತ್ತು ಬೆಸ ಸಂಖ್ಯೆ ಕಾರುಗಳ ಸಂಚಾರ ನಿಯಮ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ಜಾರಿಯಲ್ಲಿರುತ್ತದೆ. ಪೊಲೀಸ್, ಅಗ್ನಿಶಾಮಕ ದಳ, ಆಂಬುಲೆನ್ಸ್‌ಗಳಿಗೆ ಈ ಸಮ-ಬೆಸ ಸಂಚಾರಿ ನಿಯಮ ಅನ್ವಯವಾಗುವುದಿಲ್ಲ. ಬೈಕ್‌ಗಳಿಗೂ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಈ ಹೊಸ ಸಂಚಾರ ನಿಯಮದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್, ರಾಜ್ಯಸಭೆ ಸಭಾಪತಿ, ರಾಜ್ಯಪಾಲರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ವಿನಾಯಿತಿ ಸಿಗಲಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕಾರೂ ಸಹ ಸಮ ಬೆಸ ನಿಯಮದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದ್ದಾರೆ. ಸಮ-ಬೆಸ ಸಂಖ್ಯೆಯ ಸಂಚಾರದ ನಿಯಮದ ಪ್ರಮುಖ ಅಂಶಗಳು ಇಲ್ಲಿವೆ........ [ಪಿಟಿಐ ಚಿತ್ರಗಳು]

ಜನವರಿ 1 ರಿಂದ 15ರ ತನಕ ಸಂಚಾರ ನಿಯಮ ಜಾರಿಗೆ

ಜನವರಿ 1 ರಿಂದ 15ರ ತನಕ ಸಂಚಾರ ನಿಯಮ ಜಾರಿಗೆ

ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ಸಮ-ಬೆಸ ವಾಹನ ಸಂಚಾರ ನಿಯಮವನ್ನು ಜಾರಿಗೆ ತರಲಿದೆ. ಜನವರಿ 1 ರಿಂದ 15ರ ತನಕ ಈ ನಿಯಮ ಜಾರಿಯಲ್ಲಿರುತ್ತದೆ. ನಂತರ ನಿಯಮದ ಬಗ್ಗೆ ಮೌಲ್ಯ ಮಾಪನ ಮಾಡಿ, ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಭಾನುವಾರ ನಿಯಮ ಅನ್ವಯಿಸುವುದಿಲ್ಲ

ಭಾನುವಾರ ನಿಯಮ ಅನ್ವಯಿಸುವುದಿಲ್ಲ

'ಭಾನುವಾರ ಹೊರತುಪಡಿಸಿ ಉಳಿದ ಆರು ದಿನಗಳ ಕಾಲ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ಈ ನಿಯಮ ಜಾರಿಯಲ್ಲಿರುತ್ತದೆ. ದೆಹಲಿ ಮುಖ್ಯಮಂತ್ರಿಗಳು, ಸಚಿವರ ಕಾರಿಗೂ ಈ ನಿಯಮ ಅನ್ವಯಿಸಲಿದೆ' ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಯಾವ ವಾಹನಗಳಿಗೆ ವಿನಾಯಿತಿ ಇದೆ?

ಯಾವ ವಾಹನಗಳಿಗೆ ವಿನಾಯಿತಿ ಇದೆ?

* ಅಗ್ನಿಶಾಮಕ ದಳ, ಪೊಲೀಸ್, ಆಂಬುಲೆನ್ಸ್‌ಗೆ ವಿನಾಯಿತಿ ಇದೆ
* ದೆಹಲಿ ಲೋಕಾಯುಕ್ತರು, ಲೋಕಸಭೆ, ರಾಜ್ಯಸಭೆ ಸದಸ್ಯರಿಗೆ ವಿನಾಯಿತಿ
* ಸಮಸಂಖ್ಯೆ ದಿನ ಬೆಸಸಂಖ್ಯೆ ವಾಹನಗಳ ಪಾರ್ಕಿಂಗ್ ಇಲ್ಲ, ನಿಯಮ ಉಲ್ಲಂಘನೆ ಮಾಡಿದರೆ 2 ಸಾವಿರ ದಂಡ

ಈ ವಾಹನಗಳಿಗೆ ನಿಯಮ ಅನ್ವಯವಿಲ್ಲ

ಈ ವಾಹನಗಳಿಗೆ ನಿಯಮ ಅನ್ವಯವಿಲ್ಲ

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್, ರಾಜ್ಯಸಭೆ ಸಭಾಪತಿ, ರಾಜ್ಯಪಾಲರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಾಹನಗಳಿಗೆ ನಿಯಮದಿಂದ ವಿನಾಯಿತಿ ಸಿಗಲಿದೆ.

ಹೊರ ರಾಜ್ಯದ ಸಿಎಂಗಳಿಗೆ ಅನ್ವಯವಾಗುವುದಿಲ್ಲ

ಹೊರ ರಾಜ್ಯದ ಸಿಎಂಗಳಿಗೆ ಅನ್ವಯವಾಗುವುದಿಲ್ಲ

ದೆಹಲಿಗೆ ಆಗಮಿಸುವ ಹೊರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಹಾಗೆಯೇ ಮಹಿಳಾ ಚಾಲಕರಿಗೆ, ಸಿಎನ್ ಜಿ ಪ್ರಮಾಣಪತ್ರ ಹೊಂದಿರುವ ವಾಹನಗಳಿಗೆ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಡಿಸೆಂಬರ್ 28ರಂದು ಅಧಿಸೂಚನೆ ಪ್ರಕಟ

ಡಿಸೆಂಬರ್ 28ರಂದು ಅಧಿಸೂಚನೆ ಪ್ರಕಟ

ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆಯ ವಾಹನ ಸಂಚಾರದ ನಿಯಮಗಳ ಬಗ್ಗೆ ಡಿಸೆಂಬರ್ 28ರಂದು ಅಧಿಸೂಚನೆ ಹೊರಡಿಸಲಿದೆ. ನಿಯಮಜಾರಿಯಿಂದ ಆಗುವ ತೊಂದತೆ ತಪ್ಪಿಸಲು ಹೊಸದಾಗಿ 5 ಸಾವಿರ ಬಸ್ಸುಗಳ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ.

English summary
Delhi Chief Minister Arvind Kejriwal announced blueprint of odd-even traffic plan on December 24, 2015. Formula for cars to be implemented from January 1, 2016. We will carry out a review of plan after 15 days said Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X