• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ, ದೆಹಲಿಗೆ ಮಾತ್ರ ಅನ್ವಯ ಏಕೆ?: ಕೇಜ್ರಿವಾಲ್

|

ನವದೆಹಲಿ,ಜೂನ್ 20: ದೆಹಲಿಗೆ ಬರುವವರಿಗೆ ಐದು ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ನಿಯಮ ದೆಹಲಿಗೆ ಮಾತ್ರ ಏಕೆ ಅನ್ವಯವಾಗುತ್ತದೆ ಬೇರೆ ರಾಜ್ಯಗಳಿಗೆ ಯಾಕಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

   ಸೇನೆಗೆ ಪರಮಾಧಿಕಾರ ನೀಡಿದ ಮೋದಿ. | Narendra Modi | Oneindia Kannada

   ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದೆ. ಗೃಹ ಬಂಧನ ಮಾಡಿದರೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲದ ಸೋಂಕಿತರಿಂದ ಇಡೀ ಕುಟುಂಬಕ್ಕೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

   ದೆಹಲಿಗೆ ಬರುವವರಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ: ಸರ್ಕಾರಕ್ಕೆ ತಲೆನೋವು

   ಹೀಗಾಗಿ ಐದು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಸೂಚನೆ ನೀಡದ್ದರು.

   ದೆಹಲಿಯಲ್ಲಿ 50 ಸಾವಿರಿ ಕೊರೊನಾ ಸೋಂಕಿತ ಪ್ರಕರಣಗಳಿವೆ, ಆಸ್ಪತ್ರೆ ಹಾಗೂ ಹಾಸಿಗೆಗಳ ವ್ಯವಸ್ಥೆ ಕಡಿಮೆ ಇದೆ. ಸರ್ಕಾರ ಅಂದುಕೊಂಡಂತೆ 19 ಸಾವಿರ ಹಾಸಿಗೆಗಳ ವ್ಯವಸ್ಥೆಯನ್ನು ಜೂನ್ 30ರೊಳಗೆ ಮಾಡಬೇಕಿತ್ತು.

   ಆದರೆ ಈಗಿನ ಪರಿಸ್ಥಿತಿ ನೋಡಿದರೆ ಜೂನ್ 30ರೊಳಗೆ 90 ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಬೇಕಿದೆ ಎಂದು ಎಎಪಿ ಶಾಸಕರೊಬ್ಬರು ಹೇಳಿದ್ದರು.

   ದೆಹಲಿಗೆ ಮಾತ್ರ ಈ ನಿಯಮ ಅನ್ವಯ ಏಕೆ, ಕೊರೊನಾ ಸೋಂಕಿತರ ಪೈಕಿ ಮುಕ್ಕಾಲು ಭಾಗದ ಜನರಿಗೆ ಸೋಂಕಿನ ಲಕ್ಷಣಗಳೇ ಇರುವುದಿಲ್ಲ, ಅವರಿಗೆ ಹೇಗೆ ಐಸೋಲೇಷನ್ ವ್ಯವಸ್ಥೆ ಮಾಡುವುದು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

   ಈಗಾಗಲೇ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವುದರಿಂದ ರಜೆಯಲ್ಲಿರುವ ಎಲ್ಲಾ ವೈದ್ಯರು , ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.

   ಯಾವುದೇ ದೇಶದಲ್ಲೂ ಸೋಂಕಿನ ಲಕ್ಷಣಗಳೇ ಇಲ್ಲದ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಕಳುಹಿಸಿರುವ ದಾಖಲೆ ಇಲ್ಲ ಎಂದಿದ್ದಾರೆ. ದೆಹಲಿಯಲ್ಲಿ ಇಂದು 3000 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

   English summary
   Delhi Chief Minister Arvind Kejriwal this afternoon opposed Lieutenant Governor Anil Baijal's order at a meeting, according to sources, which said that no coronavirus patient in the national capital must be allowed to undergo home isolation before a mandatory five-day institutional quarantine.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X