• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಪತ್ರೆಯ ಹಾಸಿಗೆಗಳ ಲಭ್ಯತೆ ಕುರಿತ ಮಾಹಿತಿಗೆ 'ದೆಹಲಿ ಕೊರೊನಾ' ಅಪ್ಲಿಕೇಷನ್

|

ನವದೆಹಲಿ, ಜೂನ್ 2: ದೆಹಲಿ ಆಸ್ಪತ್ರೆಗಳಲ್ಲಿ ಕೊವಿಡ್ 19 ರೋಗಿಗಳಿಗಾಗಿ ಎಷ್ಟು ಹಾಸಿಗೆಗಳು ಖಾಲಿ ಇದೆ ಎಂದು ತಿಳಿದುಕೊಳ್ಳುವ ಸಲುವಾಗಿ 'ದೆಹಲಿ ಕೊರೊನಾ' ಅಪ್ಲಿಕೇಷನ್ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ದೆಹಲಿಯ ಅಸ್ಪತ್ರೆಗಳಿಗೆ ಕೊರೊನಾ ಸೋಂಕಿತರಿಗಾಗಿ 90 ಸಾವಿರ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಈಗಾಗಲೇ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಸಾಕಷ್ಟು ಮಂದಿ ಚಿಕಿತ್ಸೆಗಾಗಿ ದೆಹಲಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ದೆಹಲಿ ಗಡಿಯನ್ನು ಬಂದ್ ಮಾಡಲಾಗಿದೆ ಎಂದು ಕೇಜ್ರಿವಾಲ್ ಸೋಮವಾರ ತಿಳಿಸಿದ್ದರು.

ದೆಹಲಿಯಲ್ಲಿ ಲಾಕ್ ಡೌನ್‌ ವಿನಾಯಿತಿ; ರಾಜ್ಯದ ಗಡಿಗಳು ಬಂದ್

ಇದೀಗ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗಳು ಲಭ್ಯವಿದೆ ಎನ್ನುವ ಮಾಹಿತಿ ನೀಡುವ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ರೋಗಿಗಳು ಯಾವುದೋ ಆಸ್ಪತ್ರೆಗಳಿಗೆ ಅಲೆಯುವುದು ಬೇಡ ಅಪ್ಲಿಕೇಷನ್ ನೋಡಿಕೊಂಡು ಖಾಲಿ ಇರುವ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಈಗಾಗಲೇ ನಗರದಲ್ಲಿ 20 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಿವೆ. ಯಾವ ಆಸ್ಪತ್ರೆಗಳಲ್ಲ ಹಾಸಿಗೆಗಳು ಎಷ್ಟಿವೆ, ವೆಂಟಿಲೇಟರ್ ವ್ಯವಸ್ಥೆ ಇದೆಯೇ ಎಂಬುದನ್ನು ಮೊಬೈಲ್‌ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಕೇಜ್ರಿವಾಲ್ ವಿಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ.

English summary
A mobile application has been launched in Delhi to help track hospital beds and ventilators for COVID-19 patients, Chief Minister Arvind Kejriwal said this afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X