ಮೋದಿ ಕೆಣಕಿ, ಅಪ್ಪನಿಗೆ ವಿಶ್ ಮಾಡಿದ ಪತ್ರ ಬರೆದ ಕಾರ್ತಿ ಚಿದಂಬರಂ

Recommended Video

      P Chidambaram : ಮೋದಿ ಕೆಣಕಿ, ಅಪ್ಪನಿಗೆ ವಿಶ್ ಮಾಡಿದ ಪತ್ರ ಬರೆದ ಕಾರ್ತಿ ಚಿದಂಬರಂ

      ಚೆನ್ನೈ, ಸೆ. 16: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿ ತಿಹಾರ್ ಜೈಲು ಸೇರಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಹುಟ್ಟುಹಬ್ಬದ ದಿನ ಜೈಲಿನಲ್ಲಿರುವ ತಂದೆಗೆ ಬಲ ತುಂಬಲು ಅವರ ಪುತ್ರ ಕಾರ್ತಿ, ಮೋದಿ ಕೆಣಕಿ ಅಪ್ಪನಿಗೆ ಶುಭಹಾರೈಸಿ ಪತ್ರ ಬರೆದಿದ್ದಾರೆ.

      ಸೆ.5ರಿಂದ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಪಿ.ಚಿದಂಬರಂ ತನಿಖಾ ಸಂಸ್ಥೆ ಮುಂದೆ ಶರಣಾಗತರಾಗಲು ಸಿದ್ಧರಾಗಿದ್ದರು. ಆದರೆ, ಕೋರ್ಟ್ ಅವರನ್ನು ಜೈಲಿಗೆ ಕಳಿಸಿದೆ. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಸೆಪ್ಟೆಂಬರ್ 19ರ ತನಕ ಜೈಲುವಾಸ ಅನುಭವಿಸಬೇಕಿದೆ. ಸೆ.26ರಂದು ಚಿದಂಬರಂ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.

      ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಚಿದಂಬರಂಗೆ ನಿರಾಶೆಯಾಗಿತ್ತು. ನಂತರ ನಮಗೆ ನ್ಯಾಯಾಂಗ ಬಂಧನ ಬೇಡ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಶರಣಾಗತನಾಗಲು ನನ್ನ ಕಕ್ಷಿದಾರ ಸಿದ್ಧ" ಎಂದು ಕೋರ್ಟ್ ಮುಂದೆ ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದ್ದರು. ಆದರೆ, ಕಪಿಲ್ ವಾದಕ್ಕೆ ಮನ್ನಣೆ ಸಿಕ್ಕಿಲ್ಲ.

       Appa, no 56 can stop you: Read Karti’s letter to father Chidambaram on 74th birthday

      ಪತ್ರದಲ್ಲಿ ಕಾಶ್ಮೀರ ವಿವಾದ, ಆರ್ಥಿಕ ಸಂಕಷ್ಟ ಪಿಯೂಷ್ ಗೊಯೆಲ್ ಐನ್ ಸ್ಟೈನ್ ಹೇಳಿಕೆ, ನಿರ್ಮಲಾ ಸೀತಾರಾಮನ್ ಓಲಾ ಉಬರ್ ಹೇಳಿಕೆ ಎಲ್ಲವನ್ನು ಸೇರಿಸಿದ್ದಾರೆ.

      ತಿಹಾರ್ ಜೈಲಿನಲ್ಲಿ ಪಿ.ಚಿದಂಬರಂಗೆ ಏನೇನೆಲ್ಲಾ ವ್ಯವಸ್ಥೆ

      2014ರ ಚುನಾವಣೆ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಸ್ತಾವಿಸಿದ್ದ ತನ್ನದು 56 ಇಂಚಿನ ಎದೆ ಎಂಬ ಮಾತನ್ನು ಉಲ್ಲೇಖಿಸಿದ ಕಾರ್ತಿ,"ನೀವು ಇಂದು 74ನೇ ವಯಸ್ಸಿಗೆ ಕಾಲಿಟ್ಟಿದ್ದೀರಿ. 56 ಇಂಚಿನ ಎದೆಯಿಂದ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ಇಂದು ದೇಶದಲ್ಲಿ ಹುಟ್ಟುಹಬ್ಬ ಆಚರಿಸುವ ಸ್ಥಿತಿಯಲ್ಲಿಲ್ಲ. ನೀವಿಲ್ಲದೆ ನಿಮ್ಮ ಹುಟ್ಟುಹಬ್ಬ ಆಚರಿಸಲು ಸಾಧ್ಯವಿಲ್ಲ. ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಅನುಪಸ್ಥಿತಿ ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ನೀವು ಆದಷ್ಟು ಬೇಗನೆ ಮನೆಗೆ ವಾಪಸಾಗಿ ನಮ್ಮಿಂದಿಗೆ ಕೇಕ್ ಕತ್ತರಿಸುವ ವಿಶ್ವಾಸವಿದೆ. ಇಷ್ಟೆಲ್ಲಾ ನಡೆದರೂ ನಿಮ್ಮ ಅತಿಯಾದ ಸ್ಫೂರ್ತಿ ನೋಡಿ ನನಗೆ ಸಂತೋಷವಾಗುತ್ತಿದೆ" ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+