ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯ ಜಾಮಿಯಾ ವಿಶ್ವವಿದ್ಯಾಲಯಲ್ಲಿ ಸಿಡಿದ ಗುಂಡು

|
Google Oneindia Kannada News

ನವದೆಹಲಿ, ಫೆಬ್ರವರಿ.03: ರಾಷ್ಟ್ರ ರಾಜಧಾನಿಯ ಜಾಮಿಯಾ ವಿಶ್ವವಿದ್ಯಾಲಯದ ಬಳಿ ಮತ್ತೊಂದು ಗುಂಡಿನ ದಾಳಿ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರು ಕಡೆಗಳಲ್ಲಿ ಅಪರಿಚಿತರು ಫೈರಿಂಗ್ ನಡೆಸಿರುವ ಬಗ್ಗೆ ವರದಿಯಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನವದೆದಹಲಿ ದಕ್ಷಿಣ ಭಾಗದಲ್ಲಿರುವ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ವೇಳೆಯಲ್ಲಿ ಇಬ್ಬರು ಅಪರಿಚಿತರು ಸ್ಥಳಕ್ಕೆ ತೆರಳಿದ್ದು, ವಿಶ್ವವಿದ್ಯಾಲಯದ 5ನೇ ಗೇಟ್ ಬಳಿ ಫೈರಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ ಗುಂಡು ಹೊಡೆದಿದ್ದಕ್ಕೆ ಎರಡು ದಿನ ರಿಮ್ಯಾಂಡ್ ರೂಮ್ ವಾಸ
ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜಾಮಿಯಾ ವಿವಿಯ ಸಹಕಾರಿ ಸಮಿತಿಯ ಸದಸ್ಯರು ಕೂಡಾ ಭಾಗಿಯಾಗಿದ್ದರು. ಇನ್ನು, ಫೈರಿಂಗ್ ನಲ್ಲಿ ಇದುವರೆಗೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಬೈಕ್ ನಲ್ಲಿ ಬಂದ ಇಬ್ಬರು ಶಂಕಿತರು:
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಜಾಮಿಯಾ ವಿವಿ ಬಳಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಇಬ್ಬರು ಬೈಕ್ ನಲ್ಲಿ ಬಂದ ಅಪರಿಚಿತರು ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಒಬ್ಬ ಕೆಂಪು ಚಾಕೆಟ್ ಧರಿಸಿದ್ದನು ಎನ್ನಲಾಗಿದೆ.

Anti-CAA Protest: Firing At Delhis Jamia University Near 5th Gate
ಇನ್ನು, ಕೆಲವು ವಿದ್ಯಾರ್ಥಿಗಳ ಹೇಳಿಕೆ ಪ್ರಕಾರ ಶಾಹಿನ್ ಬಾಗ್ ಗೆ ಸಮೀಪದಲ್ಲಿರುವ ಜಾಮಿಯಾ ವಿವಿಯ 2ನೇ ಗೇಟ್ ಬಳಿ ಫೈರಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು, ಕಳೆದ 51 ದಿನಗಳಿಂದಲೂ ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.


ಫೆಬ್ರವರಿ.01ರ ಶನಿವಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಾಹಿನ್ ಬಾಗ್ ನಲ್ಲಿ ಪ್ರತ್ಯಕ್ಷನಾದ ಆರೋಪಿ ಕಪಿಲ್ ಗುಜ್ಜರ್ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿತ್ತು.

English summary
Citizenship Amendment Act: Firing At Delhi's Jamia University Near 5th Gate. 4th Day 3rd Firing Incident Reported In Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X