ರಫೆಲ್ ಡೀಲ್ ಕುರಿತು ರಾಹುಲ್ ಗಾಂಧಿಗೆ ಅನಿಲ್ ಅಂಬಾನಿ ಪತ್ರ
ನವದೆಹಲಿ, ಆಗಸ್ಟ್ 21: ರಫೆಲ್ ಡೀಲ್ ಗೂ ರಿಲಾಯನ್ಸ್ ಸಂಸ್ಥೆಗೂ ಸಂಬಂಧ ಕಲ್ಪಿಸಿರುವ ರಾಹುಲ್ ಗಾಂಧಿ ಅವರ ನಡೆಯಿಂದ ತೀವ್ರ ನೋವಾಗಿದೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಾವು ಬರೆದ ಪತ್ರದಲ್ಲಿ ರಿಲಯನ್ಸ್ ಗ್ರೂಪ್ ಚೇರ್ ಮನ್ ಅನಿಲ್ ಅಂಬಾನಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ರಫೆಲ್ ಫೈಟರ್ ಜೆಟ್ ಖರೀದಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ನಮ್ಮ ವಾಣಿಜ್ಯೋದ್ಯಮ ಕ್ಷೇತ್ರದ ವಿರೋಧಿಗಳು ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವನ್ನು ಹಾದಿ ತಪ್ಪಿಸುತ್ತಿವೆ" ಎಂದು ಅಂಬಾನಿ ಹೇಳಿದ್ದಾರೆ.

ಫ್ರಾನ್ಸ್ ನಿಂದ ಭಾರತ ಖರೀದಿಸುತ್ತಿರುವ ರಫೆಲ್ ಫೈಟರ್ ಜೆಟ್ ಗೆ ರಿಲಯನ್ಸ್ ಕಂಪನಿಯ ಕಡೆಯಿಂದ ಒಂದೇ ಒಂದು ರೂಪಾಯಿ ಮೌಲ್ಯದ ಕಾಂಪೋನೆಂಟ್ ಅನ್ನೂ ಉತ್ಪಾದಿಸಲಾಗಿಲ್ಲ. ಭಾರತೀಯ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ರಿಲಯನ್ಸ್ ಕೊಡುಗೆ ನೀಡುವ ಬಗ್ಗೆ 2014-2015 ರಲ್ಲೇ ಕಂಪನಿ ಘೋಷಣೆ ಮಾಡಿತ್ತು. ಇದಕ್ಕೂ ರಫೆಲ್ ಖರೀದಿಗೂ ಸಂಬಂಧವಿಲ್ಲ ಎಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications