ನವದೆಹಲಿ: ಆಲ್ ಖೈದಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕನ ಬಂಧನ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಆಗಸ್ಟ್ 10: ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟುಹೊಂದಿದ್ದ ಉಗ್ರನೊಬ್ಬನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಗ್ರ ಹಫೀಸ್ ಬಹಿಷ್ಕಾರಕ್ಕೆ ಮುಸ್ಲಿಂ ಧರ್ಮಗುರುಗಳಿಂದಲೇ ಒತ್ತಾಯ

ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ ಉಗ್ರನನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ಇಂದು (ಆಗಸ್ಟ್10) ಬೆಳಿಗ್ಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸಯ್ಯದ್ ಮೊಹಮ್ಮದ್ ಝಿಶಾನ್ ಅಲಿ ಎಂದು ಗುರುತಿಸಲಾಗಿದ್ದು, ಸೌದಿ ಅರೆಬಿಯಾ ಮೂಲದವನೆಂಬ ಮಾಹಿತಿ ದೊರಕಿದೆ.

ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಈತನನ್ನು ಬಂಧಿಸಿರುವ ದೆಹಲಿ ಪೊಲೀಸರನ್ನು ದೇಶದ ಜನತೆ ಅಭಿನಂದಿಸಿದೆ.

An Al-Qaeda terrorist arrested in Delhi
Modi government will not allow cricket series between India and Pakistan

ನಿನ್ನೆ(ಆಗಸ್ಟ್ 10) ತಾನೇ ಭಾರತೀಯ ಸೇನೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಈ ಘಟನೆಯ ಮರುದಿನವೇ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A terrorist linked to the al-Qaeda has been arrested by the Delhi police. The police say that he was trying to escape to Nepal when he was arrested. The police has received intelligence regarding the terrorist. A team was immediately formed to nab the operative who is allegedly linked to the al-Qaeda.
Please Wait while comments are loading...