ಭೀಮಾ-ಕೊರೆಗಾಂವ್: ಟ್ವಿಟ್ಟರ್ ನಲ್ಲಿ ಶಾ-ರಾಹುಲ್ ಮಾರಾಮಾರಿ!

ನವದೆಹಲಿ, ಸೆಪ್ಟೆಂಬರ್ 28: ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದದ್ದ ಪ್ರಗತಿಪರರ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ ಸುಪ್ರೀಂ ತೀರ್ಪನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಟ್ವಿಟ್ಟರ್ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಛೀಮಾರಿ ಹಾಕಿದ್ದಾರೆ.

ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿಪರರನ್ನು ಬಂಧಿಸಿದ್ದನ್ನು ವಿರೋಧಿಸಿ, ರಾಹುಲ್ ಗಾಂಧಿಯವರು ಆಗಸ್ಟ್ 28 ರಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅನ್ನು ಗುರಿಯಾಗಿಸಿಕೊಂಡು ಪ್ರತಿಕ್ರಿಯೆ ನೀಡಿರುವ ಶಾ, ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Amit Shah hits back at Rahul Gandhi over-bhima-koregaon verdict

'ದಡ್ಡತನಕ್ಕೆ ಒಂದೇ ಒಂದು ಜಾಗವೆಂದರೆ ಅದು ಕಾಂಗ್ರೆಸ್! ಮಾವೋವಾದಿಗಳು, ನಕಲಿ ಸಾಮಾಜಿಕ ಕಾರ್ಯಕರ್ತರು, ಭ್ರಷ್ಟ ಅಂಶಗಳನ್ನು ಬೆಂಬಲಿಸುವುದು ಮತ್ತು ಪ್ರಾಮಾಣಿಕರನ್ನು ಮತ್ತು ಕೆಲಸಗಾರರನ್ನು ಅವಮಾನಿಸುವುದೇ ಅವರ ಕೆಲಸ. ರಾಹುಲ್ ಗಾಂಧಿ ಅವರ ಕಾಂಗ್ರೆಸ್ಸಿಗೆ ಸ್ವಾಗತ!' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 28 ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ''ಭಾರತದಲ್ಲಿ ಆರೆಸ್ಸೆಸ್ ಎಂಬ ಎನ್ ಜಿಒಕ್ಕೆ ಮಾಗತ್ರ ಜಾಗವಿರುವುದು. ಉಳಿದೆಲ್ಲ ಎನ್ ಜಿಒಗಳನ್ನೂ ಮುಚ್ಚಿ! ಎಲ್ಲಾ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗಟ್ಟಿ. ದೂರು ನೀಡುವವರನ್ನು ಶೂಟ್ ಮಾಡಿ! ಹೊಸ ಭಾರತಕ್ಕೆ ಸ್ವಾಗತ" ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಅದೇ ಧಾಟಿಯಲ್ಲಿ ಟ್ವೀಟ್ ಮಾಡಿರುವ ಶಾ, ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+