ಯಾರಿಗೆಲ್ಲ ಸಿಗಲಿದೆ ಎಸ್ ಪಿಜಿ ಭದ್ರತೆ: ಸ್ಪಷ್ಟಪಡಿಸಿದ ಅಮಿತ್ ಶಾ
ನವದೆಹಲಿ, ನವೆಂಬರ್ 27: ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ ನೀಡಿದ್ದ ಎಸ್ ಪಿಜಿ ಭದ್ರತೆಯನ್ನು ವಾಪಸ್ ಪಡೆದಿದ್ದರ ಕುರಿತು ಇಂದು ಸಂಸತ್ತಿನ ಅಧಿವೇಶನ ಪ್ರಾರಂಭವಾಗುತ್ತಲೇ ಚರ್ಚೆಗೆ ಬಂದಿತು. ಈ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಭದ್ರತೆ ಯಾರಿಗೆಲ್ಲ ಸಿಗಲಿದೆ ಎಂಬುದನ್ನು ವಿವರಿಸಿ ಹೇಳಿದ್ದಾರೆ.
ಅಮಿತ್ ಶಾ ಹೇಳಿದ್ದು ಹೀಗೆ:
ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(ಎಸ್ ಪಿಜಿ) ಭದ್ರತೆ ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ಈ ವಿಚಾರವನ್ನು ನಾನು ಇಲ್ಲಿ ಮಂಡಿಸುತ್ತೇನೆ ಎಂದು ಹೇಳಿದರು.

ಈ ತಿದ್ದುಪಡಿ ಅಂಗೀಕಾರವಾದ ಬಳಿಕ, ಪ್ರಧಾನ ಮಂತ್ರಿ ಹಾಗೂ ಅವರ ಅಧೀಕೃತ ನಿವಾಸದಲ್ಲಿ ಯಾರು ವಾಸಿಸುತ್ತಾರೆಯೋ ಅವರಿಗೆ ಎಸ್ ಪಿಜಿ ಭದ್ರತೆ ಒದಗಿಸಲಾಗುವುದು ಎಂದು ಹೇಳಲಿದ್ದಾರೆ.
ಅದೇ ರೀತಿಯಾಗಿ, ಮಾಜಿ ಪ್ರಧಾನಮಂತ್ರಿಗಳು ಹಾಗೂ ಅವರ ಕುಟುಂಬಕ್ಕೆ ಎಸ್ ಪಿಜಿ ಭದ್ರತೆ ದೊರಕಲಿದ್ದು, ಆದರೆ ಅವರು ಸರ್ಕಾರ ಹಂಚಿಕೆ ಮಾಡಿರುವ ನಿವಾಸದಲ್ಲಿ ವಾಸಿಸಿರಬೇಕು. ಅದೂ ಕೇವಲ ಐದು ವರ್ಷದ ಅವಧಿಯವರಿಗೆ ಮಾತ್ರ ಈ ಭದ್ರತೆ ಸಿಗಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications